ಕರ್ನಾಟಕ

karnataka

ETV Bharat / state

ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಕೂಲಂಕಷವಾಗಿ ತನಿಖೆಯಾಗಬೇಕಿದೆ: ಸತೀಶ್ ಜಾರಕಿಹೊಳಿ‌ - belagavi news

ಧರ್ಮೇಗೌಡ ಅವರು ಈ ರೀತಿ ನಿರ್ಧಾರಕ್ಕೆ ಕೈಹಾಕಬಾರದಿತ್ತು. ಜನನಾಯಕರು ಹೀಗೆ ಮಾಡಿದ್ರೆ ಜನಸಾಮಾನ್ಯರ ಮೇಲೆ ಕಂಡಿತ ಪರಿಣಾಮ ಬೀರುತ್ತದೆ. ಈ ರೀತಿಯ ಘಟನೆಗಳು ಮುಂದೆ ನಡೆಯಬಾರದು ಎಂದಿದ್ದಾರೆ.

MLA Sathish jarkiholi
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌

By

Published : Dec 29, 2020, 6:43 PM IST

ಬೆಳಗಾವಿ: ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡ ಅವರು ಈ ರೀತಿ ನಿರ್ಧಾರಕ್ಕೆ ಕೈಹಾಕಬಾರದಿತ್ತು. ಜನನಾಯಕರು ಹೀಗೆ ಮಾಡಿದ್ರೆ ಜನಸಾಮಾನ್ಯರ ಮೇಲೆ ಕಂಡಿತ ಪರಿಣಾಮ ಬೀರುತ್ತದೆ. ಈ ರೀತಿಯ ಘಟನೆಗಳು ಮುಂದೆ ನಡೆಯಬಾರದು. ಡೆತ್ ನೋಟ ಸಿಕ್ಕಿದೆ ಎನ್ನಲಾಗುತ್ತಿದೆ. ಪೊಲೀಸರು ಕುಲಂಕಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಆತ್ಮಹತ್ಯೆ ಪ್ರಕರಣವನ್ನು ಕಾಂಗ್ರೆಸ್ ಗಲಾಟೆಗೆ ಲಿಂಕ್ ಮಾಡುತ್ತಿರುವುದು ಸರಿಯಲ್ಲ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದರು.

ಇದನ್ನೂ ಓದಿ:ಸಿಎಂ ಸೇರಿದಂತೆ ಗಣ್ಯರಿಂದ ಧರ್ಮೇಗೌಡರ ಅಂತಿಮ ದರ್ಶನ

ಬೆಳಗಾವಿ ಲೋಕ ಉಪಕದನದಕ್ಕೆ ಇಬ್ಬರ ಹೆಸರು

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಹೆಸರು ಮುನ್ನೆಲೆಗೆ ಬಂದಿವೆ. ಮೊದಲು ಮೂರು ಹೆಸರುಗಳನ್ನು ಸೂಚಿಸಲಾಗಿತ್ತು. ಪಿಲ್ಟರ್​​​​ರಿಂಗ್​​ನಲ್ಲಿ ಎರಡು ಹೆಸರುಗಳು ಉಳಿದಿವೆ. ಆದರೆ, ಅವರ ಹೆಸರು ಬಹಿರಂಗ ಪಡಿಸುವುದಿಲ್ಲ. ಟಿಕೆಟ್ ಪಟ್ಟಿಯಲ್ಲಿ ನನ್ನ ಹೆಸರಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಪಕ್ಷದ ಚಿಹ್ನೆ ಮೇಲೆ ಮಹಾನಗರ ಪಾಲಿಕೆ ಚುನಾವಣೆ ಎದುರಿಸುವ ಬಗ್ಗೆ ಪ್ರತಿಕ್ರಿಯಿಸಿ, ಅಧ್ಯಕ್ಷರು ಈಗಾಗಲೇ ಕಮಿಟಿ ರಚನೆ ಮಾಡಿದ್ದಾರೆ. ಡಿ. 31ರಂದು ಬೆಂಗಳೂರಿನಲ್ಲಿ ಈ ವಿಚಾರವಾಗಿ ಸಭೆ ಇದೆ. ಸಭೆಯಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುತ್ತದೆ. ಸದ್ಯಕ್ಕೆ ಈ ಕುರಿತು ಏನನ್ನು ಹೇಳಲಾಗುವುದಿಲ್ಲ. ಅಲ್ಲಿಯವರೆಗೂ ಕಾಯಬೇಕು ಎಂದರು.

ABOUT THE AUTHOR

...view details