ಬೆಳಗಾವಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉದ್ಧಟತನ ತೋರಲು ಎಂ.ಇ.ಎಸ್ ಮುಂದಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಲೋಕ ಸಮರಕ್ಕೆ ಎಂ.ಇ.ಎಸ್ ಸಿದ್ಧತೆ: ಬೆಳಗಾವಿಯಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ
ಗಡಿಯಲ್ಲಿ ಎಂ.ಇ.ಎಸ್ ಇದೆ ಅನ್ನೋದನ್ನು ತೋರ್ಪಡಿಸಲು 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆ ಪಕ್ಷದ ಮುಖಂಡರು ಮುಂದಾಗಿದ್ದಾರೆ.
ತಡರಾತ್ರಿ ಸಭೆ ನಡೆಸಿದ ಎಂ.ಇ.ಎಸ್,
ನಗರದಲ್ಲಿ ತಡರಾತ್ರಿ ಸಭೆ ನಡೆದ ಸಭೆಯಲ್ಲಿ ಎಂ.ಇ.ಎಸ್, ನಗರ ಘಟಕದ ಅಧ್ಯಕ್ಷ ದೀಪಕ್ ದಳವಿ, ಮಾಜಿ ಶಾಸಕರಾದ ಅರವಿಂದ ಪಾಟೀಲ್ ಮತ್ತು ಮನೋಹರ ಕಿಣೇಕರ್ ವಹಿಸಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂ.ಇ.ಎಸ್ ಸೋಲನ್ನ ಅನುಭವಿಸಿತ್ತು. ಗಡಿಯಲ್ಲಿ ಎಂ.ಇ.ಎಸ್ ಕ್ರಿಯಾಶೀಲವಾಗಿದೆ ಎಂದು ತೋರ್ಪಡಿಸಲು ಮುಖಂಡರು 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಅಲ್ಲದೆ ಅಭ್ಯರ್ಥಿಗಳ ಠೇವಣಿ ಹಣವನ್ನು ಜನರಿಂದಲೇ ಸಂಗ್ರಹಿಸಲು ಮುಖಂಡರು ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.