ಬೆಳಗಾವಿ:ಗಣಪತಿ ನಿಮಜ್ಜನಕ್ಕೆ ತೆರಳಿದ್ದ ವೇಳೆ ಕೆರೆಯಲ್ಲಿ ಮುಳುಗಿ ಬಾಲಕ ಮತ್ತು ಯುವಕ ಸಾವನ್ನಪ್ಪಿರುವ ಘಟನೆ ಖಾನಾಪುರ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.
ಯುವಕ, ಬಾಲಕ ನೀರುಪಾಲು... ಗಣೇಶ ನಿಮಜ್ಜನ ವೇಳೆ ದುರಂತ - Khanapur Police Station
ಗಣಪತಿ ನಿಮಜ್ಜನ ವೇಳೆ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ. ಖಾನಾಪುರ ತಾಲೂಕಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇಬ್ಬರು ಯುವಕರ ದುರ್ಮರಣ
ಬೆಟಗೇರಿ ಗ್ರಾಮದ ಓಂಕಾರ (16), ಸಾಗರ (22) ಘಟನೆಯಲ್ಲಿ ಮೃತಪಟ್ಟವರು. ಈ ಇಬ್ಬರು ಗುರುವಾರ ಸಂಜೆ ಗಣಪತಿ ನಿಮಜ್ಜನಕ್ಕೆ ತೆರಳಿದಾಗ ಈ ಅವಘಡ ಸಂಭವಿಸಿದೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.