ಕರ್ನಾಟಕ

karnataka

ETV Bharat / state

ನಾಮಪತ್ರ ಹಿಂಪಡೆಯಲು ಮನವೊಲಿಕೆ​.. ಶಹಜಾನರನ್ನು ಪ್ರೀತಿಯಿಂದಲೇ ಗೆದ್ದ ಕೈಪಡೆ - ಉಪಚುನಾವಣೆ 2019

ಅಥಣಿ ಕ್ಷೇತ್ರದ ಕಾಂಗ್ರೆಸ್​​ ಬಂಡಾಯ ಅಭ್ಯರ್ಥಿಯಾಗಿದ್ದ ಶಹಜಾನ ಡೊಂಗರಗಾಂವರನ್ನು ಚುನಾವಣಾ ಅಖಾಡದಿಂದ ಹಿಂದೆ ಸರಿಯುವಂತೆ ಮಾಡಲು ಕಾಂಗ್ರೆಸ್​​ ನಾಯಕರು ಯಶಸ್ವಿಯಾಗಿದ್ದಾರೆ.

ಅಥಣಿಯಲ್ಲಿ ಸಭೆ ನಡೆಸಿದ ಕೈ ನಾಯಕರು

By

Published : Nov 21, 2019, 5:13 PM IST

ಚಿಕ್ಕೋಡಿ: ಕಾಂಗ್ರೆಸ್​​ನ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಹಜಾನ ಡೊಂಗರಗಾಂವರನ್ನು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಕೈ ನಾಯಕರು ಸಫಲರಾಗಿದ್ದಾರೆ.

ಅಥಣಿ ಕ್ಷೇತ್ರದ ಕಾಂಗ್ರೆಸ್​​ ಅಭ್ಯರ್ಥಿ ಗಜಾನನ ಮಂಗಸೂಳಿ ಹಾಗೂ ಮಾಜಿ ಸಚಿವ ಎಂ.ಬಿ ಪಾಟೀಲ್​​, ಡೊಂಗರಗಾಂವ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ, ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರಿಂದ ನಾಮಪತ್ರ ಹಿಂಪಡೆದು ಗಜಾನನ ಮಂಗಸೂಳಿಯವರಿಗೆ ಬೆಂಬಲ ನೀಡುವುದಾಗಿ ಬಂಡಾಯ ಅಭ್ಯರ್ಥಿ ಶಹಜಾನ ಡೊಂಗರಗಾಂವ ತಿಳಿಸಿದ್ದಾರೆ.

ಅಥಣಿಯಲ್ಲಿ ಸಭೆ ನಡೆಸಿದ ಕೈ ನಾಯಕರು

ಒಟ್ಟು ಅಥಣಿ ಕ್ಷೇತ್ರದಲ್ಲಿನ ಮೂವರು ಪಕ್ಷೇತರ ಅಭ್ಯರ್ಥಿಗಳು ಸಹ ನಾಮಪತ್ರ ಹಿಂಪಡೆದಿದ್ದು, ಮೂವರು ಅಭ್ಯರ್ಥಿಗಳು ಕಾಂಗ್ರೆಸ್​​ನ ಗಜಾನನ ಮಂಗಸೂಳಿಯವರಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ABOUT THE AUTHOR

...view details