ಅಥಣಿ: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಬಸ್ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಅನ್ಲಾಕ್ಗೆ ಆದೇಶ ಹೊರಡಿಸಿದ್ದು ಇವತ್ತಿನಿಂದ ಸಾರಿಗೆ ಇಲಾಖೆ ಜನಸಾಮಾನ್ಯರ ಸೇವೆಗೆ ಬಸ್ ಸಂಚಾರ ಪುನರಾರಂಭಿಸಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ರು.
ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಭಾರತ ಸರ್ಕಾರದ ಸ್ವಾಮಿತ್ವ ಯೋಜನೆಯ ಗ್ರಾಮೀಣ ಆಸ್ತಿಗಳ ಗಣಕೀಕೃತ ಆಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಡಿಸಿಎಂ ಸವದಿ ಮಾತನಾಡಿದ್ರು. ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲು ಬಾರಿಗೆ ತಾಲೂಕಿನ ಅರಟಾಳ ಹಾಗೂ ಬಡಚಿ ಗ್ರಾಮಗಳ ಸ್ವಾಮಿತ್ವ ಯೋಜನೆ ಪೂರ್ಣವಾಗಿದ್ದು ಗಣಕೀಕೃತ ಆಸ್ತಿ ಪತ್ರ ಹಂಚಿಕೆಯನ್ನು ಸಚಿವ ಸವದಿ ಗ್ರಾಮಸ್ಥರಿಗೆ ಹಸ್ತಾಂತರಿಸಿದರು.