ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಹಾಗೂ ಖೇಮಲಾಪೂರ ಗ್ರಾಮದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾದ ಬಗ್ಗೆ ಈಟಿವಿ ಭಾರತ ಬಿತ್ತರಿಸಿದ್ದ ವರದಿಯಿಂದ ಎಚ್ಚೆತ್ತ, ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ನೀರು ನಿಂತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಟಿವಿ ಭಾರತ ಫಲಶ್ರುತಿ: ಬೆಳೆ ಹಾನಿಯಾದ ಗ್ರಾಮಗಳಿಗೆ ರಾಯಬಾಗ ತಹಶೀಲ್ದಾರ್ ಭೇಟಿ - Rain in Belgavi
ರಾಯಬಾಗ ತಾಲೂಕಿನಲ್ಲಿ ಮಳೆಯಿಂದ ಬೆಳೆ ಹಾನಿ ಸಂಭವಿಸಿದ ಗ್ರಾಮಗಳಿಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೃಷ್ಣಾ ನದಿ ಪ್ರವಾಹದಿಂದ ಪರಮಾನಂದವಾಡಿ ಹಾಗೂ ಖೇಮಲಾಪೂರ ಗ್ರಾಮಗಳ ಸುಮಾರು 400 ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿತ್ತು. ಈ ಬಗ್ಗೆ ಅ.1 ರಂದು ಕೃಷ್ಣಾ ನದಿ ತೀರದ ಜನರ ಗೋಳು ಕೇಳುವವರಿಲ್ಲ... ಜಮೀನನಲ್ಲೇ ನಿಂತ ನೀರು, ಸಾಂಕ್ರಾಮಿಕ ರೋಗದ ಭೀತಿ! ಎಂಬ ಶೀರ್ಷಿಕೆಯಲ್ಲಿ ಈಟಿವಿ ಭಾರತ ವರದಿ ಬಿತ್ತರಿಸಿತ್ತು. ವರದಿ ಗಮನಿಸಿದ, ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಇಂದು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ತಹಶೀಲ್ದಾರ್, ಅವರು, ರೈತರ ಜಮೀನಿಗೆ ನೀರು ನುಗ್ಗಿ ಬೆಳೆಹಾನಿ ಸಂಭವಿಸಿದ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಜಮೀನಿನಲ್ಲಿ ನಿಂತ ನೀರು ಹೊರ ಹೋಗುತ್ತಿಲ್ಲ. ಅದನ್ನು ಖಾಲಿ ಮಾಡುವ ಬಗ್ಗೆ ನಮ್ಮ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.