ಕರ್ನಾಟಕ

karnataka

ETV Bharat / state

ಹಳೆಯ ರೈಲ್ವೇ ಯೋಜನೆ ಅನುಷ್ಠಾನಕ್ಕೆ ಮೊದಲ‌ ಆದ್ಯತೆ: ಸಚಿವ ಸುರೇಶ ಅಂಗಡಿ - undefined

ಹೊಸ ಯೋಜನೆಗಿಂತ, ಬಾಕಿ ಉಳಿದ ಯೋಜನೆ ಅನುಷ್ಠಾನಕ್ಕೆ ಮೊದಲು ಆದ್ಯತೆ. ಜನರಿಗೆ ಅನಕೂಲ ಆಗುವ ಯೋಜನೆ ರೂಪಿಸುತ್ತೇವೆ. ಸವದತ್ತಿಗೆ ರೈಲ್ವೆ ಸಂಪರ್ಕದ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ಮಾಡುತ್ತೇನೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟರೆ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೆನೆ.

ಸಚಿವ ಸುರೇಶ ಅಂಗಡಿ

By

Published : Jun 1, 2019, 7:05 PM IST

ಬೆಳಗಾವಿ:ಹೊಸ‌ ಯೋಜನೆ ರೂಪಿಸುವುದಕ್ಕಿಂತ ಹಳೇ ಯೋಜನೆ ಜಾರಿಗೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದದಿಂದ ನನಗೆ ಸಚಿವನಾಗುವ ಅವಕಾಶ ಸಿಕ್ಕಿದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಅನೇಕ ಬೇಡಿಕೆಗಳಿವೆ. ಈ ಸಂಬಂಧ ಈಗಾಗಲೇ ನೈರುತ್ಯ ರೈಲ್ವೇ ವಲಯ ಪ್ರಬಂಧಕರ ಜತೆಗೆ ಚರ್ಚಿಸಿದ್ದೇನೆ. ಮತ್ತೊಮ್ಮೆ ಸಭೆ ಕರೆದು ಚರ್ಚಿಸಿ ಬೇಡಿಕೆ ಈಡೇರಿಸಲು ಯತ್ನಿಸುತ್ತೆ‌ನೆ.

ಸಚಿವ ಸುರೇಶ ಅಂಗಡಿ

ಹೊಸ ಯೋಜನೆಗಿಂತ, ಬಾಕಿ ಉಳಿದ ಯೋಜನೆ ಅನುಷ್ಠಾನಕ್ಕೆ ಮೊದಲು ಆದ್ಯತೆ ಕೊಡುತ್ತೇನೆ. ಜನರಿಗೆ ಅನಕೂಲ ಆಗುವ ಯೋಜನೆ ರೂಪಿಸುತ್ತೇವೆ. ಸವದತ್ತಿಗೆ ರೈಲ್ವೆ ಸಂಪರ್ಕದ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ಮಾಡುತ್ತೇನೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟರೆ ಯೋಜನೆ ಅನುಷ್ಠಾನ ಆದ್ಯತೆ ನೀಡುತ್ತೇನೆ ಎಂದು ನೂತನ ಸಚಿವರು ಭರವಸೆ ನೀಡಿದ್ರು.

For All Latest Updates

TAGGED:

ABOUT THE AUTHOR

...view details