ಚಿಕ್ಕೋಡಿ:ಜವಳಿ ಖಾತೆಯ ಸಚಿವ ಶ್ರೀಮಂತ ಪಾಟೀಲ್ ಅವರು ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ್ ಗ್ರಾಮದ ಟೆಕ್ಸ್ಟೈಲ್ ಪಾರ್ಕ್ಗೆ ಭೇಟಿ ನೀಡಿದ್ದರು.
ಬೆಳಗಾವಿ ಜಿಲ್ಲೆಯ ಟೆಕ್ಸ್ಟೈಲ್ ಪಾರ್ಕ್ಗೆ ಭೇಟಿ ಜವಳಿ ಸಚಿವರ ಭೇಟಿ - chikkodi news
ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಅವರು ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ್ ಗ್ರಾಮದ ಟೆಕ್ಸ್ಟೈಲ್ ಪಾರ್ಕ್ಗೆ ಭೇಟಿ ನೀಡಿ ಪರಿಶೀಲಿಸಿದರು.
![ಬೆಳಗಾವಿ ಜಿಲ್ಲೆಯ ಟೆಕ್ಸ್ಟೈಲ್ ಪಾರ್ಕ್ಗೆ ಭೇಟಿ ಜವಳಿ ಸಚಿವರ ಭೇಟಿ textile-minister-who-visited-textile-park-in-belgaum](https://etvbharatimages.akamaized.net/etvbharat/prod-images/768-512-6198491-thumbnail-3x2-bgm.jpg)
ಸುಮಾರು 75 ಎಕರೆ ಜಮೀನಿನಲ್ಲಿ ನಿರ್ಮಾಣವಾದ ಟೆಕ್ಸ್ಟೈಲ್ ಪಾರ್ಕ್ನ ವೀಕ್ಷಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಬಾರಿಗೆ ಜವಳಿ ಖಾತೆ ತೆಗೆದುಕೊಂಡ ಬಳಿಕ ಟೆಕ್ಸ್ ಟೈಲ್ ಪಾರ್ಕ್ಗೆ ಭೇಟಿ ನೀಡಿದ್ದೇನೆ. ಇಲ್ಲಿ ಮೂಲಸೌಕರ್ಯಗಳಾದ ರಸ್ತೆ, ವಿದ್ಯುತ್, ನೀರಿನ ಕೊರತೆ ಇವೆ. ಆದಷ್ಟು ಬೇಗ ಇಲ್ಲಿನ ಜನತೆಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜವಳಿ ಉದ್ಯಮದಲ್ಲಿ ಈಗಾಗಲೇ ಹಲವು ಉದ್ಯಮಿಗಳು ಸಾಲ ತೆಗೆದುಕೊಂಡು ಜವಳಿ ಉದ್ಯಮ ನಡೆಸುತ್ತಿದ್ದು, ಅವರೆಲ್ಲ ನಷ್ಟದಲ್ಲಿದ್ದಾರೆ ಎಂದರು. ಇನ್ನು, ಕೆಲ ಕೆಲವರು ಮಿಲ್ಗಳನ್ನು ನಡೆಸುತ್ತಲೇ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇದು ಕಲಿಯುಗ, ಇಂತಹ ಘಟನೆ ನಡೆಯಬಾರದು. ಆದಷ್ಟು ಬೇಗ ಇಂತಹ ಮಿಲ್ಗಳನ್ನ ಬಂದ್ ಮಾಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.