ಚಿಕ್ಕೋಡಿ (ಬೆಳಗಾವಿ) :ಕಾರು ಬೈಕ್ ನಡುವೆ ಡಿಕ್ಕಿ ಹೊಡದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟ್ ಬಳಿ ದುರ್ಘಟನೆ ಸಂಭವಿಸಿದೆ. ಮೃತ ಪಟ್ಟ ಬೈಕ್ ಸವಾರರಿಬ್ಬರು ಸಹೋದರರಾಗಿದ್ದು ಚಿಕ್ಕೋಡಿ ತಾಲೂಕಿನ ನವಳಿಹಾಳ ಗ್ರಾಮದ ಶಿವಕುಮಾರ ರಾಜು ಘೋಷೆ (25), ಸಹೋದರ ಅಶ್ವಿನ್ಕುಮಾರ ರಾಜು ಘೋಷೆ (23)ಎಂದು ಗುರುತಿಸಲಾಗಿದೆ.
ಸಹೋದರರು ಇಬ್ಬರು ಸ್ವಗ್ರಾಮದಿಂದ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಎಂಬ ಗ್ರಾಮದ ಕಡೆಗೆ ಹೊರಟ್ಟಿದ್ದರು. ಕಾರು ಕಬ್ಬೂರು ಗ್ರಾಮದ ಕಡೆಯಿಂದ ಬರುತ್ತಿತ್ತು. ಬೆಳಕೂಡ ಗೇಟ್ ಬಳಿ ಕಾರು ಚಾಲಕ ಮುಂದೆ ಇದ್ದ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಎದುರುಗಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಕುರಿತಂತೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಲೈಟ್ ಕಂಬಗಳಿಗೆ ಗುದ್ದಿ 50 ಅಡಿ ಆಳಕ್ಕೆ ಬಿದ್ದ ಕಾರು, ಓರ್ವ ಸಾವು.. ಬಟ್ಟೆ ತೊಳೆಯಲು ಹೋಗಿ ಅತ್ತೆ ಸೊಸೆ ನೀರುಪಾಲು!
ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ :ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಹತ್ತಿರ ಇರುವ ಕೃಷ್ಣಾ ನದಿಯಲ್ಲಿ 65 ರಿಂದ 70 ವಯಸ್ಸಾದ ವ್ಯಕ್ತಿಯ ಶವ ಪತ್ತೆಯಾಗಿದೆ. ನದಿಯಲ್ಲಿ ಮೃತ ದೇಹ ತೇಲುವುದನ್ನು ಸ್ಥಳೀಯರು ಗಮನಿಸಿ ಅಥಣಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ನುರಿತ ಈಜುಪಟುಗಳ ಸಹಾಯದಿಂದ ಮೃತ ದೇಹವನ್ನು ಹೊರತೆಗೆದು ಪರಶೀಲನೆ ನಡೆಸಿದ್ದಾರೆ. ಇದುವರೆಗೆ ಮೃತ ದೇಹದ ಗುರುತು ಪತ್ತೆಯಾಗಿಲ್ಲ. ಮೃತ ದೇಹದಲ್ಲಿ ಬಿಳಿ ಬಟ್ಟೆ ಬಿಳಿ ಕೂದಲು ಕಪ್ಪು ಮುಖ ಹೊಂದಿರುವ 65 ರಿಂದ 70 ವಯಸ್ಸಿನ ಅಜ್ಜ ಎಂದು ಗುರುತಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿ ಓರ್ವ ವ್ಯಕ್ತಿ ಸಾವು: ಹುಬ್ಬಳ್ಳಿಯ ನವನಗರದ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪರುಶುರಾಮ್ ವಾಲಿಕಾರ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪರುಶುರಾಮ್ ಮತ್ತು ಅವರ ಸ್ನೇಹಿತ ಬೈಕ್ ಮೇಲೆ ಚಲಿಸುತ್ತಿದ್ದ ವೇಳೆ ಎದುರಿಗೆ ಬಂದ ಟ್ರ್ಯಾಕ್ಟರ್ಗೆ ಬೈಕ್ ಹೊಡೆದಿದೆ, ಪರಿಣಾಮ ಬೈಕ್ ಸವಾರ ಪರುಶುರಾಮ್ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಇದನ್ನೂ ಓದಿ:ನಿಕ್ಕಿ ಯಾದವ್ ಕತ್ತು ಹಿಸುಕಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢ... ತಂದೆಯಿಂದ ಮರಣದಂಡನೆಗೆ ಒತ್ತಾಯ