ಅಥಣಿ : ಇಲ್ಲಿನ ರಡ್ಡೇರಟ್ಟಿ ಗ್ರಾಮದ ಎಸ್ ಟಿ ಕಾಲೋನಿಯೊಂದರಲ್ಲಿ ಸುಮಾರು ಹತ್ತಕ್ಕೂ ಅಧಿಕ ಮಂದಿಗೆ ಡೆಂಘಿ ಜ್ವರ ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರು ಜೀವ ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಬೇಜವಬ್ದಾರಿತನ ಮೆರೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಒಂದೇ ಗ್ರಾಮದ ಹತ್ತು ಜನರಿಗೆ ಡೆಂಘಿ: ಅಧಿಕಾರಿಗಳ ನಿರ್ಲಕ್ಷ್ಯ - Latest Dengue News In Athani
ಇಲ್ಲಿನ ರಡ್ಡೇರಟ್ಟಿ ಗ್ರಾಮದ ಎಸ್ ಟಿ ಕಾಲೋನಿಯೊಂದರಲ್ಲಿ ಸುಮಾರು ಹತ್ತಕ್ಕೂ ಅಧಿಕ ಮಂದಿಗೆ ಡೆಂಘೀ ಜ್ವರ ಬಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಜನರು ಜೀವ ಭಯದಿಂದ ಊರು ತೊರೆಯುವ ಸ್ಥಿತಿ ನಿರ್ಮಾಣವಾಗಿದ್ದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಬೇಜವಾಬ್ದಾರಿತನ ಮೆರೆದಿದ್ದಾರೆ.
![ಒಂದೇ ಗ್ರಾಮದ ಹತ್ತು ಜನರಿಗೆ ಡೆಂಘಿ: ಅಧಿಕಾರಿಗಳ ನಿರ್ಲಕ್ಷ್ಯ](https://etvbharatimages.akamaized.net/etvbharat/prod-images/768-512-4997555-thumbnail-3x2-dns.jpg)
ಒಂದೇ ಗ್ರಾಮದ ಹತ್ತು ಜನರಿಗೆ ಡೆಂಗ್ಯೂ
ಒಂದೇ ಗ್ರಾಮದ ಹತ್ತು ಜನರಿಗೆ ಡೆಂಗ್ಯೂ
ಅಥಣಿ ತಾಲೂಕು ವೈದ್ಯಾಧಿಕಾರಿಗಳು ವಿಷಯ ತಿಳಿದರೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜೊತೆಗೆ ಡೆಂಘಿ ಬಂದಿರುವ ವಿಷಯವನ್ನೇ ಅಲ್ಲಗಳೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ನಾಲ್ಕುಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ವಾಸವಾಗಿರುವ ಗ್ರಾಮದಲ್ಲಿ, ನೆರೆ ಬಂದಿರುವ ಕಾರಣ ಸದ್ಯ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಕೂಡಲೇ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.