ಚಿಕ್ಕೋಡಿ: ಉಪ ವಿಭಾಗ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತು ಕೃಷ್ಣಾ ನದಿ ತಟದಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ 9 ಮಂದಿರಗಳು ಹಾಗೂ ಮಸೀದಿಗಳು ಜಲಾವೃತಗೊಂಡಿವೆ.
ಚಿಕ್ಕೋಡಿ ಉಪ ವಿಭಾಗದಲ್ಲಿ ದೇವಸ್ಥಾನ, ಮಸೀದಿಗಳು ಜಲಾವೃತ - ಶ್ರಾವಣ ಮಾಸ ಪ್ರಾರಂಭ
ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಮಂದಿರ ಹಾಗೂ ಮಸೀದಿಗಳು ಜಲಾವೃತಗೊಂಡಿವೆ.
ದೇವಸ್ಥಾನ, ಮಸೀದಿಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕಿನ ನದಿ ತೀರದಲ್ಲಿರುವ ದೇವಾಲಯಗಳು ಜಲಾವೃತವಾಗಿವೆ. ಕೃಷ್ಣಾ ಪ್ರವಾಹಕ್ಕೆ ಬಂಗಾಲಿ ಬಾಬಾ, ಮುಲ್ಲಾಕಿನ ದರ್ಗಾ, ದತ್ತ ಮಂದಿರ, ಸಂಗಮೇಶ್ವರ ದೇವಸ್ಥಾನ, ಹುಲ್ಲರಗಿ ಲಕ್ಷ್ಮಿ, ಯಲ್ಲಮ್ಮ ದೇವಸ್ಥಾನ, ಬಾವಾನ ಸುಗಂಧಾದೇವಿ ಸೇರಿದಂತೆ 19 ದೇವಸ್ಥಾನಗಳು ಮುಳುಗಡೆಯಾಗಿವೆ.
ಈಗಾಗಲೇ ಶ್ರಾವಣ ಮಾಸ ಪ್ರಾರಂಭವಾದ ಹಿನ್ನೆಲೆಯಲಿ ಭಕ್ತರು ದೇವಾಲಯಗಳಿಗೆ ತೆರಳುತ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹೋಗದಂತೆ ಜಿಲ್ಲಾಡಳಿತ ಸೂಚಿಸಿದೆ.