ಅಥಣಿ:ಅಪರೂಪದ ಕಂಕಣ ಸೂರ್ಯಗ್ರಹಣದಿಂದ ಬಾನಂಗಳದ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾದು ಕುಳಿತಿದೆ.
ಕಂಕಣ ಸೂರ್ಯಗ್ರಹಣ: ಅಥಣಿಯಲ್ಲಿ ನಾಳೆ ಬಂದ್ ಆಗಲಿವೆ ದೇವಾಲಯಗಳು - ಅಥಣಿ ಸುದ್ದಿ
ಅಪರೂಪದ ಕಂಕಣ ಸೂರ್ಯಗ್ರಹಣದಿಂದ ಬಾನಂಗಳದ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾದು ಕುಳಿತಿದೆ.
ಕಂಕಣ ಸೂರ್ಯಗ್ರಹಣ : ಬಂದ್ ಆಗಲಿವೆ ದೇವಾಲಯಗಳು
ಇನ್ನು ಕಂಕಣ ಸೂರ್ಯಗ್ರಹಣ ಆಸ್ತಿಕರ ನಿದ್ದೆಗೆಡಿಸಿದ್ದಂತು ಸುಳ್ಳಲ್ಲ. ನಗರದ ಪ್ರಮುಖ ದೇವಾಲಯಗಳು ನಾಳೆ ಮುಂಜಾನೆ 6 ಗಂಟೆಯಿಂದ ಬಂದ್ ಆಗಲಿವೆ. ಅದರಲ್ಲೂ ಪ್ರಮುಖವಾಗಿ ಸಿದ್ದೇಶ್ವರ ದೇವಾಲಯ, ಗಜ್ಜಿನ ಮಠ ಹಾಗೂ ಸುಕ್ಷೇತ್ರ ಖಿಳೇಗಾಂವ ಸ್ವಯಂ ಉದ್ಭವ ಬಸ್ವೇಶ್ವರ ಮೂರ್ತಿ ದೇವಾಲಯ ಸೇರಿದಂತೆ ಕೊಕಟನೂರ ಯಲ್ಲಮ್ಮ ದೇವಿ ಸೇರಿದಂತೆ ವಿವಿಧ ಗ್ರಾಮಗಳ ಬಹುತೇಕ ದೇವಾಲಯಗಳು ನಾಳೆ ಬಂದ್ ಆಗಲಿವೆ.
ಸೂರ್ಯಗ್ರಹಣ ಮುಗಿದ ಬಳಿಕ ದೇವಾಲಯ ತೊಳೆದು ನಂತರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕವೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.