ಕರ್ನಾಟಕ

karnataka

ETV Bharat / state

ಪರೀಕ್ಷಾ ಮೌಲ್ಯಮಾಪನ ಭತ್ಯೆಯನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ ಶಿಕ್ಷಕ... - Chikkodi DDPI Gazana Mannikeri

ಶಿಕ್ಷಕರೊಬ್ಬರು ಎಸ್ಎಸ್‌ಎಲ‌್‌ಸಿ ಪರೀಕ್ಷಾ ಮೌಲ್ಯಮಾಪನದಿಂದ ಬಂದ ಭತ್ಯೆಯ ಹಣವನ್ನು ಕೋವಿಡ್- 19 ಚಿಕಿತ್ಸೆಗೆ ಬಳಕೆಯಾಗಲಿ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರ ಮುಖಾಂತರ ಪ್ರಧಾನಮಂತ್ರಿ ಪರಿಹಾರ ನಿಧಿಗೆ 5,302 ರೂಪಾಯಿ‌ ಚೆಕ್ ನೀಡಿದ್ದಾರೆ.

Chikkodi
ಪ್ರಧಾನಮಂತ್ರಿ ಪರಿಹಾರ ನಿಧಿಗೆ 5,302 ರೂಪಾಯಿ‌ ಚೆಕ್

By

Published : Jul 23, 2020, 9:38 PM IST

ಚಿಕ್ಕೋಡಿ: ಇಲ್ಲೊಬ್ಬ ಶಿಕ್ಷಕರು ಎಸ್ಎಸ್‌ಎಲ‌್‌ಸಿ ಪರೀಕ್ಷಾ ಮೌಲ್ಯ ಮಾಪನದಿಂದ ಬಂದ ಭತ್ಯೆಯ ಹಣವನ್ನು ಕೋವಿಡ್- 19 ಚಿಕಿತ್ಸೆಗೆ ಬಳಕೆಯಾಗಲಿ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರ ಮುಖಾಂತರ ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಮೌಲ್ಯಮಾಪನದಿಂದ ಬಂದಿದ್ದ ಭತ್ಯೆ ಮೊತ್ತ 5,302 ರೂಪಾಯಿ‌ಗಳನ್ನು ಚೆಕ್ ಮೂಲಕ ಡಿಡಿಪಿಐ ಅವರಿಗೆ ಸಲ್ಲಿಸಿದ್ದಾರೆ.

ಕೋವಿಡ್- 19 ಚಿಕಿತ್ಸೆಗೆ ಬಳಕೆಯಾಗಲಿ ಎಂದು ಶಿಕ್ಷಕರು ಎಸ್ಎಸ್‌ಎಲ‌್‌ಸಿ ಪರೀಕ್ಷಾ ಮೌಲ್ಯ ಮಾಪನದಿಂದ ಬಂದ ಭತ್ಯೆಯ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ 5,302 ರೂಪಾಯಿ‌ ಚೆಕ್ ನೀಡಿದ್ದಾರೆ.

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕರ ಅರ್ಜುನ ಗದಗಯ್ಯಗೋಳ ಅವರು ಪರೀಕ್ಷೆ ಮಾಲ್ಯ ಮಾಪನದಿಂದ ಬಂದ ಹಣವನ್ನು ಪರಿಹಾರ ನಿಧಿಗೆ ನೀಡುವ ಮೂಲಕ ಇತರ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಭಾರತೀಯ ಪ್ರಜೆಗಳಾದ ನಾವು ಪ್ರತಿಯೊಬ್ಬರೂ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದರೊಂದಿಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡು ಸರ್ಕಾರದ ಜೊತೆ ನಿಲ್ಲಬೇಕು. ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಮುಂದಿನ ತಿಂಗಳು ನನ್ನ ಸಂಬಳದಿಂದ ಕೈಲಾದಷ್ಟು ಹಣವನ್ನು ಪರಿಹಾರ ನಿಧಿಗೆ ಹಸ್ತಾಂತರಿಸುವುದಾಗಿ ಹೇಳಿದರು.

ABOUT THE AUTHOR

...view details