ಕರ್ನಾಟಕ

karnataka

ETV Bharat / state

ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕ ಕೊರೊನಾಗೆ ಬಲಿ - ಚಿಕ್ಕೋಡಿ

ಬೆಳಗಾವಿ‌ ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕನೋರ್ವ ಕೊರೊನಾಗೆ ಬಲಿಯಾಗಿದ್ದಾರೆ. ರಾಜಶೇಖರ ತಳವಾರ (56) ಮೃತ ಶಿಕ್ಷಕ.

chikkodi
ರಾಜಶೇಖರ ತಳವಾರ

By

Published : May 23, 2021, 10:18 AM IST

ಚಿಕ್ಕೋಡಿ:ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮತ್ತೋರ್ವ ಶಿಕ್ಷಕ ಕೊರೊನಾಗೆ ಬಲಿಯಾಗಿದ್ದಾರೆ.

ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಲ್ಲೋಳ್ಳಿ ಗ್ರಾಮದ ಹುಲ್ಲೋಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ರಾಜಶೇಖರ ತಳವಾರ (56) ಮೃತ ಶಿಕ್ಷಕ. ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಸವದತ್ತಿ ಮತಕ್ಷೇತ್ರದ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶಿಕ್ಷಕ ರಾಜಶೇಖರ ಚುನಾವಣೆ ಕರ್ತವ್ಯ ಮುಗಿಸಿ ಬಂದ ಬಳಿಕ ಜ್ವರದಿಂದ ಬಳಲುತ್ತಿದ್ದರು.

ಬಳಿಕ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ರಾಜಶೇಖರ ತಳವಾರ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಓದಿ:ಕೊರೊನಾ ಎರಡನೇ ಅಲೆ, ಚಿಕ್ಕೋಡಿಯಲ್ಲಿ 22 ಶಿಕ್ಷಕರು ಬಲಿ

ABOUT THE AUTHOR

...view details