ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ.. ಶಿಕ್ಷಕ ಅರೆಸ್ಟ್​, ಸಹಕರಿಸಿದ ಟೀಚರ್​ ವಿರುದ್ಧವೂ ದೂರು

ರಾಜ್ಯದ ಶಾಲೆಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು-ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ, ಬೆದರಿಕೆ ಹಾಕಿದ ಶಿಕ್ಷಕ ಅರೆಸ್ಟ್​ - ಆರೋಪಿಗೆ ಸಹಕರಿಸಿದ ಇನ್ನೋರ್ವ ಶಿಕ್ಷಕನ ವಿರುದ್ಧವೂ ದೂರು

Teacher arrested for allegedly sexually harassing student
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕ ಬಂಧನ

By

Published : Dec 26, 2022, 1:23 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಸ್ಥಳೀಯ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜೊತೆ ಶಿಕ್ಷಕನೋರ್ವ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಶಿಕ್ಷಕನನ್ನು ಬಂಧಿಸಲಾಗಿದೆ. ಈತನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಖಾಸಗಿ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯ ಮೈ ಮುಟ್ಟುವುದು ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಬಿ.ಆರ್ ಬಾಡಕರ್​ ಎಂಬ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ಡಿ.23 ರಂದು ದೂರು ನೀಡಿದ್ದಾರೆ.

ಶಿಕ್ಷಕ ಬಿ.ಆರ್ ಬಾಡಕರ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿರುವುದು ಮತ್ತು ಲೈಂಗಿಕ ದೌರ್ಜನ್ಯ ನಡೆಸಿರುವುದು ಮಾತ್ರವಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಇಂಟರ್ನಲ್ ಪರೀಕ್ಷೆ ಅಂಕ ಕಡಿತಗೊಳಿಸುವ ಬೆದರಿಕೆ ಹಾಕಿದ್ದರಂತೆ. ಇನ್ನು, ಶಿಕ್ಷಕನ ಈ ಕೃತ್ಯಕ್ಕೆ ಸಹಕರಿಸಿದ್ದಾನೆ ಎಂದು ಅದೇ ಶಾಲೆಯ ಇನ್ನೋರ್ವ ಶಿಕ್ಷಕ ಕೆ.ಎಂ ಕೋಳಿ ಎಂಬುವರ ವಿರುದ್ಧವೂ ದೂರು ನೀಡಲಾಗಿದೆ.

ಆರೋಪಿತರ ಮೇಲೆ ಐಪಿಸಿ ಸೆಕ್ಷನ್ 354 (ಎ), 109, 506 ರ ಅಡಿಯಲ್ಲಿ ಸಂಕೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ.. ಕೋಲು, ಕಸಬರಿಗೆ ಹಿಡಿದು ಶಿಕ್ಷಕನಿಗೆ ಥಳಿಸಿದ ಹೆಣ್ಮಕ್ಕಳು!

ABOUT THE AUTHOR

...view details