ಚಿಕ್ಕೋಡಿ : ಕಾಗವಾಡ ತಾಲೂಕು ಪಂಚಾಯತ್ನಲ್ಲಿ ಪ್ರಥಮ ಬಾರಿಗೆ ತಾಲೂಕು ಪಂಚಾಯತ್ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜುಗೂಳ ತಾಲೂಕು ಪಂಚಾಯಿತಿ ಸದಸ್ಯೆ ಕೃಷ್ಣಾಬಾಯಿ ಬಂಡು ನಂದ್ಯಾಳ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯತ್ ಪ್ರಥಮ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ ಚಿಕ್ಕೋಡಿ ಉಪವಿಭಾಗಿಯ ಅಧಿಕಾರಿ ಯುಕೇಶ ಕುಮಾರ ಎಸ್ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರು ನೇತೃತ್ವ ವಹಿಸಿದ್ದರು.
ಕಾಗವಾಡ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಜರುಗಿತು. 9 ಸದಸ್ಯರನ್ನು ಹೊಂದಿರುವ ಹೊಸ ತಾಲೂಕಿನಲ್ಲಿ ಓರ್ವ ಸದಸ್ಯರು ಮೃತಪಟ್ಟಿದ್ದು, 8 ಸದಸ್ಯರಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.
ಅಧ್ಯಕ್ಷರಾಗಿ ಜುಗೂಳ ತಾ.ಪಂ ಸದಸ್ಯೆ ಕೃಷ್ಣಾಬಾಯಿ ಬಂಡು ನಂದ್ಯಾಳ ಇವರು 6 ಮತಗಳನ್ನು ಪಡೆದು ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿರುವ ಉಗಾರ ತಾ.ಪಂ. ಸದಸ್ಯ ವಸಂತ ಖೋತಾ 2 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಉಪಾಧ್ಯಕ್ಷರಾಗಿ ಕಾತ್ರಾಳ ತಾಪಂ ಸದಸ್ಯೆ ಶೋಭಾ ಸುಖದೇವ ಬಂಡಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.