ಕರ್ನಾಟಕ

karnataka

ETV Bharat / state

ಕೊಚ್ಚೆ ಮೇಲೆ ಕಲ್ಲೆಸೆಯಲ್ಲ - ರಮೇಶ್‌ ಜಾರಕಿಹೊಳಿ.. ಕೊಚ್ಚೆ ಯಾರು - ಹೆಬ್ಬಾಳ್ಕರ್‌ ಪ್ರಶ್ನೆ‌.. - Talk war between leaders

ಪಿಎಲ್​ಡಿ ಬ್ಯಾಂಕ್ ಚುನಾವಣೆ ನಂತರ ಉಭಯ ನಾಯಕರ ಮಧ್ಯೆ ಈ ಹಿಂದೆಯೂ ತೀವ್ರ ತರವಾದ ಟಾಕ್ ವಾರ್ ಶುರುವಾಗಿತ್ತು ಈಗ ಅದು ಮತ್ತೆ ಶುರುವಾಗಿದೆ‌.

Talk war
ಟಾಕ್ ವಾರ್

By

Published : Jun 15, 2020, 4:33 PM IST

Updated : Jun 15, 2020, 6:01 PM IST

ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಮತ್ತೆ ಟಾಕ್‌ ವಾರ್ ಶುರುವಾಗಿದೆ.

ರಮೇಶ್‌ ಜಾರಕಿಹೊಳಿ- ಲಕ್ಷ್ಮಿ ಹೆಬ್ಬಾಳ್ಕರ್ ಮಧ್ಯೆ ಮಾತಿನ ಕದನ..

ಜಿಪಂ ಸಭಾಭವನದಲ್ಲಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮೀಣ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಈ ಘಟನೆ ನಡೆದಿದೆ. ಪಿಎಲ್​ಡಿ ಬ್ಯಾಂಕ್ ಚುನಾವಣೆ ನಂತರ ಉಭಯ ನಾಯಕರ ಮಧ್ಯೆ ತೀವ್ರತರವಾದ ಟಾಕ್ ವಾರ್ ಮತ್ತೆ ಶುರುವಾಗಿದೆ‌.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಜಾರಕಿಹೊಳಿ‌ ಅವರು ಕೊಳಚೆಗೆ ಹೋಲಿಸಿದರಲ್ಲದೇ, ಬರುವ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದ ಬಗ್ಗೆಯೂ ವಿಶೇಷ ಕಾಳಜಿ ವಹಿಸುವುದಾಗಿ ಹೇಳಿದರು. ಆ ಮೂಲಕ ಹೆಬ್ಬಾಳ್ಕರ್ ಅವರನ್ನು ಸೋಲಿಸುವುದಾಗಿ ಪರೋಕ್ಷವಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕಿ ಹೆಬ್ಬಾಳ್ಕರ್, ಸಚಿವ ರಮೇಶ್ ಜಾರಕಿಹೊಳಿ‌ ಅವರು ನೀಡಿರುವ ಆಹ್ವಾನ ಸ್ವೀಕರಿಸುತ್ತೇನೆ. ಜನರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ‌. ಕೊಳಚೆ ಪದ ಬಳಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು. ಅಸಲಿಗೆ ಕೊಳಚೆ ಅಂದ್ರೆ ಯಾರು ಅಂತಾ ಹೆಬ್ಬಾಳ್ಕರ್‌ ಪ್ರಶ್ನಿಸಿದರು.

Last Updated : Jun 15, 2020, 6:01 PM IST

ABOUT THE AUTHOR

...view details