ಬೆಳಗಾವಿ:1924ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಇದಾಗಿತ್ತು ಎಂಬುವುದು ವಿಶೇಷ. ವಿಪರ್ಯಾಸವೆಂದರೆ ಗಾಂಧೀಜಿ ಒಂದು ವಾರ ತಂಗಿದ್ದ ಬೆಳಗಾವಿಯಲ್ಲಿ ಸ್ವಚ್ಛ ಭಾರತ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ.
ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್ ಜಾರಿಗೊಳಿಸಿತ್ತು. ಗಾಂಧೀಜಿ ಜೊತೆಗೆ ನಂಟು ಹೊಂದಿರುವ ಬೆಳಗಾವಿ ಸ್ವಚ್ಛ ಭಾರತ ಯೋಜನೆ ಜಾರಿಯಲ್ಲಿ ಹಿಂದೆ ಬಿದ್ದಿದೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿದೆ. ಈ ಕಾರಣಕ್ಕೆ ಬೆಳಗಾವಿಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ರಾಜ್ಯ ಸೇರಿದಂತೆ ಹೊರ ರಾಜ್ಯದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಕುಂದಾನಗರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸಮರ್ಪಕ ಸಾರ್ವಜನಿಕ ಶೌಚ ಗೃಹಗಳಿಲ್ಲ. ಅಲ್ಲೊಂದು, ಇಲ್ಲೊಂದು ಎಂಬತಿರುವ ಶೌಚ ಗೃಹಗಳು ಕೂಡ ಬಳಕೆಗೆ ಬಾರದಂತಿವೆ.
ಗಾಂಜಾ ಸೇವನೆ ಕೇಂದ್ರಗಳಾಗಿವೆ ಪಬ್ಲಿಕ್ ಟಾಯ್ಲೆಟ್
ಆರು ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ 15 ಸಾರ್ವಜನಿಕ ಶೌಚ ಗೃಹ ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ ಬಹುತೇಕ ಶೌಚ ಗೃಹಗಳು ದುರಸ್ತಿ ಹಂತದಲ್ಲಿವೆ. ಅನೇಕ ಸಮುದಾಯ ಶೌಚ ಗೃಹಗಳ ಬಾಗಿಲು ಮುರಿದ ಸ್ಥಿತಿಯಲ್ಲಿದ್ರೆ, ನೀರಿನ ಸೌಲಭ್ಯಗಳೂ ಇಲ್ಲ. ಈ ಕಾರಣಕ್ಕೆ ಯುವಕರು ಶೌಚ ಗೃಹಗಳನ್ನು ಗಾಂಜಾ ಸೇವಿಸಲು, ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ರೋಟರಿ ಕ್ಲಬ್ ನಡೆಸುವ ಫೇಡ್ ಶೌಚ ಗೃಹಗಳಲ್ಲಿ ಮಾತ್ರ ಶುಚಿತ್ವ ಇದ್ದು, ಪಾಲಿಕೆಯ ಉಚಿತ ಸಮುದಾಯ ಶೌಚ ಗೃಹಗಳ ಸ್ಥಿತಿ ಶೋಚನೀಯವಾಗಿದೆ.
ಸ್ವಚ್ಛ ಭಾರತ ಮಿಷನ್ ನಿಯಮ ಉಲ್ಲಂಘನೆ