ಬೆಳಗಾವಿ:ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರು ಕಾಂಗ್ರೆಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಜಪಿಸಿ ಅಚ್ಚರಿ ಮೂಡಿಸಿದರು.
ಮೋದಿ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಹೆಸರು ಜಪಿಸಿದ ಸುರೇಶ ಅಂಗಡಿ - kannada news
ಚಿಕ್ಕೋಡಿಯಲ್ಲಿ ನಡೆದ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರು ಕಾಂಗ್ರೆಸ್ ಮಾಜಿ ಸಚಿವ ರಮೇಶ್ ರಕಿಹೊಳಿ ಹೆಸರನ್ನು ಜಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೋದಿ ಸಭೆಯಲ್ಲಿ ರಮೇಶ ಜಾರಕಿಹೊಳಿ ಹೆಸರು ಜಪಿಸಿದ ಸುರೇಶ ಅಂಗಡಿ
ಚಿಕ್ಕೋಡಿ ಪಟ್ಟಣದಲ್ಲಿ ನಡೆದ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶದಲ್ಲಿ ವೇದಿಕೆಗೆ ಮೋದಿ ಆಗಮಿಸುವುದಕ್ಕಿಂತ ಮುನ್ನವೇ ಸುರೇಶ್ ಅಂಗಡಿ ಭಾಷಣ ಆರಂಭಿಸಿದ್ದರು. ಈ ವೇಳೆ, ವೇದಿಕೆ ಮೇಲಿದ್ದ ಮಾಜಿ ಸಂಸದ ರಮೇಶ್ ಕತ್ತಿ ಅವರನ್ನು ನೆನಪಿಸಿಕೊಳ್ಳುವ ಭರದಲ್ಲಿ, ರಮೇಶ್ ಜಾರಕಿಹೊಳಿ ಎಂದರು. ಅದಕ್ಕೆ ಪ್ರತಿಯಾಗಿ ರಮೇಶ್ ಕತ್ತಿ ಕೂಡ ಎದ್ದು ನಿಂತು ಅಂಗಡಿ ಅವರಿಗೆ ನಮಸ್ಕರಿಸಿದರು.