ಬೆಳಗಾವಿ: ಬರೊಬ್ಬರಿ 63 ದಿನಗಳ ಬಳಿಕ ಬೆಳಗಾವಿ ರೈಲು ನಿಲ್ದಾಣದಿಂದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿಗೆ ಪ್ರಯಾಣ ಬೆಳೆಸಿತು.
63 ದಿನಗಳ ಬಳಿಕ ಬೆಳಗಾವಿಯಿಂದ ಬೆಂಗಳೂರಿಗೆ ಸೂಪರ್ ಫಾಸ್ಟ್ ರೈಲು ಸಂಚಾರ - ಲಾಕ್ಡೌನ್ ಸಡಿಲಿಕೆ
ಲಾಕ್ಡೌನ್ ಸಡಿಲಿಕೆ ನಂತರ ಇದೇ ಮೊದಲ ಬಾರಿಗೆ ಬೆಳಗಾವಿಯಿಂದ ರೈಲು ಸಂಚಾರ ಆರಂಭವಾಗಿದೆ. ಹದಿನಾಲ್ಕು ಬೋಗಿಗಳನ್ನು ಹೊಂದಿರುವ ಚೇರ್ ಕಾರ್ ರೈಲಿನಲ್ಲಿ 99 ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ರೈಲು
ಲಾಕ್ಡೌನ್ ಸಡಿಲಿಕೆ ನಂತರ ಇದೇ ಮೊದಲ ಬಾರಿಗೆ ಬೆಳಗಾವಿಯಿಂದ ರೈಲು ಸಂಚಾರ ಆರಂಭವಾಗಿದೆ. ಹದಿನಾಲ್ಕು ಬೋಗಿಗಳನ್ನು ಹೊಂದಿರುವ ಚೇರ್ ಕಾರ್ ರೈಲಿನಲ್ಲಿ 99 ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ಪ್ರತಿ ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಬಳಿಕ ತ್ರಿಬಲ್ ಸೀಟ್ನಲ್ಲಿ ಇಬ್ಬರಿಗೆ ಕುಳಿತಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಪ್ರಯಾಣದ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಆಗಾಗ ಸ್ಯಾನಿಟೈಸರ್ ಮೂಲಕ ಕೈ ತೊಳೆಯುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಸೂಚನೆ ನೀಡಿದರು.