ಕರ್ನಾಟಕ

karnataka

ETV Bharat / state

ಭಾನುವಾರದ ಲಾಕ್​ಡೌನ್​: ಅಥಣಿ ಪಟ್ಟಣ ಸಂಪೂರ್ಣ ಸ್ತಬ್ಧ - ಭಾನುವಾರದ ಲಾಕ್​ಡೌನ್​

ರಾಜ್ಯದಲ್ಲಿ ಹಬ್ಬುತ್ತಿರುವ ಕೊವಿಡ್​-19 ಮಹಾಮಾರಿಗೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರಕ್ಕೆ ಅಥಣಿ ಪಟ್ಟಣದಲ್ಲಿ ಜನತೆ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ.

Athani
ಅಥಣಿ

By

Published : Jul 12, 2020, 1:45 PM IST

ಅಥಣಿ(ಬೆಳಗಾವಿ):ರಾಜ್ಯ ಸರ್ಕಾರ ಕೊರೊನಾ ವೈರಸ್ ತಡೆಗಟ್ಟಲು ಪ್ರತಿ ಭಾನುವಾರ ಲಾಕ್​ಡೌನ್ ಆದೇಶದಂತೆ ಅಥಣಿ ಪಟ್ಟಣ ಸಂಪೂರ್ಣವಾಗಿ ಸ್ತಬ್ಧವಾಗಿ ಬಿಕೋ ಎನ್ನುತ್ತಿದೆ.

ಸಂಪೂರ್ಣ ಸ್ತಬ್ಧವಾದ ಅಥಣಿ

ರಾಜ್ಯದಲ್ಲಿ ಹಬ್ಬುತ್ತಿರುವ ಕೊವಿಡ್​-19ಗೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರಕ್ಕೆ ಜನರು ಬೆಂಬಲ ನೀಡಿದ್ದಾರೆ. ಹಾಗಾಗಿ ಸಂಪೂರ್ಣ ಪಟ್ಟಣ ಸ್ತಬ್ಧಗೊಂಡಿದೆ.

ಪಟ್ಟಣದಲ್ಲಿ ಅಥಣಿ ಪೋಲಿಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಜನತೆಗೆ ವಿನಾ ಕಾರಣ ಹೊರಗೆ ತಿರುಗಾಡಿದಂತೆ ಎಚ್ಚರಿಕೆ ಜೊತೆಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ವಿನಾ ಕಾರಣ ಯಾರಾದರೂ ತಿರುಗಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿಕೊಳ್ಳಲಾವುದು ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ನಿಗಾ ವಹಿಸಿದ್ದಾರೆ.

ABOUT THE AUTHOR

...view details