ಬೆಳಗಾವಿ :ಹಿಂಬದಿ ಟೈರ್ ಪಂಚರ್ ಆಗಿ ಕಬ್ಬು ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಣೆಬೈಲ ಗ್ರಾಮದ ಬಳಿ ನಡೆದಿದೆ.
ಬೆಳಗಾವಿ-ಪಣಜಿ ಹೆದ್ದಾರಿ ಮೂಲಕ ದೂದ್ ಗಂಗಾ ಸಕ್ಕರೆ ಕಾರ್ಖಾನೆಗೆ ಈ ಲಾರಿ ತೆರಳುತ್ತಿತ್ತು. ಟೈರ್ ಪಂಚರ್ ಆದ ಹಿನ್ನೆಲೆಯಲ್ಲಿ ಲಾರಿ ನಿಲ್ಲಿಸಿದ ಚಾಲಕ ತಕ್ಷಣವೇ ತಾನು ಕೆಳಗಿಳಿದರು. ಚಾಲಕ ಕೆಳಗಿಳಿಯುತ್ತಿದ್ದಂತೆ ಲಾರಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.