ಕರ್ನಾಟಕ

karnataka

ETV Bharat / state

ಕಬ್ಬಿನ ಬೆಲೆ ನಿಗದಿ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ.. ರೈತ ಸಂಘ ಒತ್ತಾಯ - Chikkodi peasant's demand

2016 ರಿಂದ 2019ರವರೆಗೆ ಎಸ್ಇಪಿ ಪ್ರಕಾರ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಪಾವತಿಸಿಲ್ಲ. ಈ ವರ್ಷ ಕಬ್ಬಿನ ಬೆಲೆಯ‌ನ್ನ ಇನ್ನೂ ನಿಗದಿ ಮಾಡಿಲ್ಲ. ಹೀಗಾಗಿ, ಆದಷ್ಟು ಬೇಗ ಈ ವರ್ಷ ಕಬ್ಬಿಗೆ ಕನಿಷ್ಟ 3,500 ರೂ. ನಿಗದಿ ಮಾಡಬೇಕು..

Sugarcane bill fixed: Sugar factory: Farmers' union demanded
ಕಬ್ಬಿನ ಬಿಲ್ ನಿಗಧಿ‌ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ : ರೈತ ಸಂಘ ಒತ್ತಾಯ

By

Published : Oct 7, 2020, 4:19 PM IST

ಚಿಕ್ಕೋಡಿ(ಬೆಳಗಾವಿ) :ಹಂಗಾಮಿನಲ್ಲಿ ಬೆಳೆದ ಕಬ್ಬಿನ ಬೆಲೆಯನ್ನು ನಿಗದಿ ಮಾಡದೆ ಕಾರ್ಖಾನೆಗಳು ಕಬ್ಬು ನುರಿಸಲು ಸಜ್ಜಾಗುತ್ತಿವೆ. ಆದರೆ, ಪ್ರತಿ ಟನ್ ಕಬ್ಬಿಗೆ ಎಷ್ಟು ಬೆಲೆ ಕೊಡುತ್ತಾರೆ ಎನ್ನುವುದು ರೈತರ ಚಿಂತೆಯಾಗಿದೆ.

ಕಬ್ಬಿನ ಬೆಲೆ ನಿಗದಿ ಮಾಡಿ ನಂತರ ಕಾರ್ಖಾನೆ ಪ್ರಾರಂಭಿಸಿ‌ ಎಂದು ಚಿಕ್ಕೋಡಿ ಉಪ ದಂಡಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಮನವಿ ಸಲ್ಲಿಸಿದರು.

ಕಬ್ಬಿನ ಬೆಲೆ ನಿಗದಿ‌ ಮಾಡಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ, ರೈತ ಸಂಘ ಒತ್ತಾಯ

2016 ರಿಂದ 2019ರವರೆಗೆ ಎಸ್ಇಪಿ ಪ್ರಕಾರ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಪಾವತಿಸಿಲ್ಲ. ಈ ವರ್ಷ ಕಬ್ಬಿನ ಬೆಲೆಯ‌ನ್ನ ಇನ್ನೂ ನಿಗದಿ ಮಾಡಿಲ್ಲ. ಹೀಗಾಗಿ, ಆದಷ್ಟು ಬೇಗ ಈ ವರ್ಷ ಕಬ್ಬಿಗೆ ಕನಿಷ್ಟ 3,500 ರೂ. ನಿಗದಿ ಮಾಡಬೇಕು.

ಇಲ್ಲವಾದ್ರೇ ರೈತ ಸಂಘದ ಮುಖಾಂತರ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು‌ ಸೇನೆ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಎಚ್ಚರಿಸಿದ್ದಾರೆ.

ABOUT THE AUTHOR

...view details