ಕರ್ನಾಟಕ

karnataka

ETV Bharat / state

ಕಬ್ಬಿನ ದರ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭ: ರೈತರ ಆಕ್ರೋಶ - ಚಿಕ್ಕೋಡಿ

ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 2,875 ರೂ. ದರ ನಿಗದಿಪಡಿಸಿದೆ. ಆದರೆ, ಕರ್ನಾಟಕ ಸರ್ಕಾರ ಇನ್ನೂ ಕೂಡ ಕಬ್ಬಿನ ದರ ನಿಗದಿಪಡಿಸಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Sugar factories opening
ಕಬ್ಬಿನ ಬಿಲ್ ನಿಗಧಿ ಮಾಡದೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭ..

By

Published : Oct 13, 2020, 12:34 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಅದರಲ್ಲಿ ಚಿಕ್ಕೋಡಿ ಉಪ ವಿಭಾಗದ ಪ್ರತಿ ತಾಲೂಕಿನಲ್ಲೂ ಕಬ್ಬು ಬೆಳಗಾರರಿದ್ದು, ಈ ಭಾಗದಲ್ಲಿ 20ಕ್ಕೂ ಹೆಚ್ಚು ಕಾರ್ಖಾನೆಗಳು ಇವೆ. ಈಗಾಗಲೇ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಬಾಯ್ಲರ್ ಪ್ರದೀಪನ ಕಾರ್ಯ ಮುಗಿಸಿ ರೈತರು ಕಬ್ಬು ಕಟಾವು ಮಾಡಲು ಮುಂದಾದರೂ ಸಹಿತ ಸಕ್ಕರೆ ಕಾರ್ಖಾನೆಗಳು ಮಾತ್ರ ಕಬ್ಬಿನ ದರ ನಿಗದಿ ಮಾಡಿಲ್ಲ.

ಕಬ್ಬಿನ ದರ ನಿಗದಿ ಮಾಡದೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭ: ರೈತರ ಆಕ್ರೋಶ

ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ 2,875 ರೂ. ದರ ನಿಗದಿಪಡಿಸಿದೆ. ಆದರೆ, ಕರ್ನಾಟಕ ಸರ್ಕಾರ ಇನ್ನೂ ಕೂಡ ಕಬ್ಬಿನ ದರ ನಿಗದಿಪಡಿಸಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಮಾದರಿಯಲ್ಲಿ ಕಬ್ಬಿನ ದರ ನಿಗದಿ ಮಾಡಿ ಎಂದು ಕೆಲ ರೈತ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಅದರ ಜೊತೆಗೆ ಕಳೆದ ವರ್ಷ ಬಾಕಿ ಉಳಿದ ಕಬ್ಬಿನ ಬಿಲ್‌ಗಳನ್ನು ಕೆಲ ಸಕ್ಕರೆ ಕಾರ್ಖಾನೆಗಳು ನೀಡಿಲ್ಲ. ಆ ಬಿಲ್‌ಗಳನ್ನು ಸಹಿತ ನೀಡಿ ಎಂದು ರೈತರು ಆಗ್ರಹಿಸಿದ್ದಾರೆ.

ಪ್ರತಿ ವರ್ಷ ಅದೇ ಹಾಡು ಅದೇ ರಾಗ ಎನ್ನುವಂತಾಗಿದೆ. ಪ್ರತಿ ಬಾರಿ ಸಕ್ಕರೆ ಕಾರ್ಖಾನೆಗಳು ದರ ನಿಗದಿ‌ ಮಾಡುವುದಿಲ್ಲ. ಹೀಗಾಗಿ ರೈತರು ಪ್ರತಿಭಟನೆ ಮಾಡುತ್ತಾರೆ. ಕೆಲ ದಿನಗಳ ನಂತರ ಮತ್ತೆ ಕಾರ್ಖಾನೆಗಳನ್ನ ಪ್ರಾರಂಭಿಸುತ್ತಾರೆ. ದರ ನಿಗದಿ ಮಾಡದೇ ರೈತರು ಕೊನೆಗೆ ಕಬ್ಬನ್ನು ಕಾರ್ಖಾನೆಗಳಿಗೆ ಕಳಿಸಬೇಕು. ಇದು ಪ್ರತಿ ವರ್ಷ ನಡೆದು ಬಂದ ದಾರಿಯಾಗಿದೆ. ಕಬ್ಬಿನ ದರ ನಿಗದಿಪಡಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ‌ ಎನ್ನುವುದು ರೈತರ ಆರೋಪವಾಗಿದೆ.

ಕರ್ನಾಟಕದಲ್ಲಿ ಕೆಲ ಸಕ್ಕರೆ ಕಾರ್ಖಾನೆಗಳು ರಾಜಕೀಯ ವ್ಯಕ್ತಿಗಳು ಹಾಗೂ ಶಾಸಕರ ಒಡೆತನದಲ್ಲಿವೆ ಎನ್ನುವ ಕಾರಣಕ್ಕೆ ಸರ್ಕಾರ ಮೌನ ವಹಿಸಿದೆ ಎನ್ನುವುದು ಇಲ್ಲಿ ಪ್ರಶ್ನೆಯಾಗಿ ಉಳಿದಿದೆ. ಸರ್ಕಾರ ಕಬ್ಬಿನ ದರ ನಿಗದಿ ಮಾಡಲು ಹಿಂದೇಟು ಹಾಕುತ್ತಿರುವುದು ರೈತರ ಸಂಶಯಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರರಿಗೆ ಹಲವಾರು ರೈತ ಸಂಘಟನೆಗಳು ಮನವಿ ಸಲ್ಲಿಸಿದರೂ, ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ರೈತರ ಅಳಲಾಗಿದೆ.

ಕಳೆದ ವರ್ಷ ಸರ್ಕಾರ ಪ್ರತಿ ಟನ್ ಕಬ್ಬಿಗೆ 2,750 ರೂ. ಬೆಲೆ ಘೋಷಣೆ ಮಾಡಲಾಗಿತ್ತು. ಆದರೆ ಕೆಲ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿ‌ ಮಾಡಿರುವ ದರ‌ ನೀಡಿಲ್ಲ. ಈ ಬಾರಿ ಕೊರೊನಾ ಸೋಂಕಿನಿಂದ ಇಡೀ ದೇಶದ ಜನರು ಕಂಗಾಲಾಗಿದ್ದಾರೆ. ರೈತರು ಈ ಬಾರಿ ಸಾಲದ ಸುಳಿಯಲ್ಲಿ ಸಿಕ್ಕಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರು ಈ ಬಾರಿ ಕೇಂದ್ರ ಸರ್ಕಾರ ನಿಗದಿ‌ ಮಾಡಿರುವ ಪ್ರತಿ ಟನ್‌ಗೆ 2,875 ರೂ. ದರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ABOUT THE AUTHOR

...view details