ಚಿಕ್ಕೋಡಿ : ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ದಿನಂಪ್ರತಿ ದುಡಿದು ಜೀವನ ಸಾಗಿಸುವ ಅದೆಷ್ಟೋ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿದ್ದು, ತಿನ್ನಲು ಆಹಾರ ಸಿಗದೆ ಕಂಗಾಲಾಗಿವೆ. ಚಿಕ್ಕೋಡಿ ಪಟ್ಟಣದಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರು ಹಾಗೂ ಬಿಹಾರಿ ಕಾರ್ಮಿಕರಿಗೆ ಸಮಾಜ ಸುಧಾರಕ ಪ್ರಕಾಶ ವಂಟೊತ್ತೆ ಸಹಾಯದ ಹಸ್ತ ಚಾಚಿದ್ದಾರೆ.
ಬಡ ಜೀವಗಳಿಗೆ ಆಸರೆಯಾದ ಸಮಾಜ ಸುಧಾರಕ ಪ್ರಕಾಶ ವಂಟೊತ್ತೆ.. - ಬಡ ಜೀವಗಳಿಗೆ ಆಸರೆಯಾದ ಸಮಾಜ ಸುಧಾರಕ ಪ್ರಕಾಶ ವಂಟಮೂತ್ತೆ
ಸರ್ಕಾರ ಅಕ್ಕಿ ನೀಡಿದೆ, ಚಿಕ್ಕೋಡಿ ಶಾಸಕರು ಜೋಳ ಹಾಗೂ ಬೇಳೆ ಕಾಳು ಕೊಟ್ಟಿರುವ ಕಾರಣ ಈ ಸಮಾಜ ಸೇವಕ ಆಹಾರ ತಯಾರಿಕೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನ ನೀಡಿ ಮಾದರಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಪ್ರಕಾಶ ವಂಟಮೊತ್ತೆ 600 ಬಡ ಕುಟುಂಬಗಳು ಹಾಗೂ ಬಿಹಾರಿ ಕಾರ್ಮಿಕರಿಗೆ 15 ದಿನಕ್ಕಾಗುವಷ್ಟು ದಿನಸಿ ಸಾಮಾಗ್ರಿ ವಿತರಿಸಿ ಮಾದರಿಯಾಗಿದ್ದಾರೆ. ತರಕಾರಿ, ಬ್ರೆಡ್, ಮಸಾಲೆ ಪದಾರ್ಥಗಳು, ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಚಹಾ ಪುಡಿ ಸೇರಿ ನಿತ್ಯದ ಆಹಾರಕ್ಕೆ ಬಳಸುವ ಸಾಮಾಗ್ರಿಗಳನ್ನ ನೀಡಿದ್ದಾರೆ.
ಸರ್ಕಾರ ಅಕ್ಕಿ ನೀಡಿದೆ, ಚಿಕ್ಕೋಡಿ ಶಾಸಕರು ಜೋಳ ಹಾಗೂ ಬೇಳೆ ಕಾಳು ಕೊಟ್ಟಿರುವ ಕಾರಣ ಈ ಸಮಾಜ ಸೇವಕ ಆಹಾರ ತಯಾರಿಕೆಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನ ನೀಡಿ ಮಾದರಿಯಾಗಿದ್ದಾರೆ. ಪಟ್ಟಣದಲ್ಲಿ ಬಡ ಕುಟುಂಬಗಳಲ್ಲಿ ಯಾರಿಗಾದ್ರೂ ದಿನಸಿ ಸಾಮಾಗ್ರಿಯ ಸಮಸ್ಯೆ ಇದ್ದರೆ ತಮಗೆ ದೂರವಾಣಿ ಕರೆ ಮಾಡಿದ್ರೇ, ಅಂಥವರಿಗೆ ಆಹಾರ ಸಾಮಾಗ್ರಿ ತಲುಪಿಸುತ್ತೇವೆ ಅಂತಾ ಪ್ರಕಾಶ್ ವಂಟಮೂತ್ತೆ ತಿಳಿಸಿದ್ದಾರೆ.