ಕರ್ನಾಟಕ

karnataka

ETV Bharat / state

ಬಾಯಲ್ಲಿ ನೀರೂರಿಸುವ ಬಗೆ ಬಗೆಯ ಮಾವು ಸವಿದ ಕುಂದಾನಗರಿ ಜನತೆ - ಮಾವಿನ ಹಣ್ಣು

ಕುಂದಾನಗರಿಯಲ್ಲಿ ನಡೆದ ಈ ಮಾವು ಮೇಳದಲ್ಲಿ ದೂರದ ರೈತರು ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟ ಮಾಡಿದ್ದು,  ನಗರದ ಜನತೆ ಅತಿ ಉತ್ಸಾಹದಿಂದ ಪಾಲ್ಗೊಂಡು ರುಚಿಯಾದ ಮಾವು ಸವಿದರು. ಸುಮಾರು ಹತ್ತು ದಿನಗಳ ಕಾಲ ನಡೆದ ಮಾವು ಮೇಳ ಯಶಸ್ವಿಯಾಗಿ ಇಂದು ಮುಕ್ತಾಯಗೊಂಡಿತು.

ಮಾವು ಮೇಳ

By

Published : Jun 7, 2019, 1:43 PM IST

ಬೆಳಗಾವಿ :ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ನಡೆದ 2 ನೇ ವರ್ಷದ ಮಾವು ಮೇಳ ಯಶಸ್ವಿಯಾಗಿ ನಡೆಯಿತು. 10 ದಿನಗಳ ಕಾಲ ನಡೆದ ಈ ಮಾವು ಮೇಳದಲ್ಲಿ ಅನೇಕ ಬಗೆಯ ಮಾವಿನ ಹಣ್ಣು ಸವಿದು ಜನ ಸಂತೋಷಪಟ್ಟರು.

ಮಾವು ಮೇಳ
ಕುಂದಾನಗರಿಯಲ್ಲಿ ನಡೆದ ಈ ಮಾವು ಮೇಳದಲ್ಲಿ ದೂರದ ರೈತರು ತಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣುಗಳ ಪ್ರದರ್ಶನದ ಜೊತೆಗೆ ಮಾರಾಟ ಮಾಡಿದ್ದು, ನಗರದ ಜನತೆ ಅತಿ ಉತ್ಸಾಹದಿಂದ ಪಾಲ್ಗೊಂಡು ರುಚಿಯಾದ ಮಾವು ಸವಿದರು. ಸುಮಾರು ಹತ್ತು ದಿನಗಳ ಕಾಲ ನಡೆದ ಮಾವು ಮೇಳ ಯಶಸ್ವಿಯಾಗಿ ಇಂದು ಮುಕ್ತಾಯಗೊಂಡಿತು.
ಈ ಬಾರಿ ಮಾವಿನ ಹಣ್ಣು ಭರ್ಜರಿ ಮಾರಾಟ

ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಮಾವು ಮೇಳದಲ್ಲಿ ಈ ವರ್ಷ ಮಾವು ಭರ್ಜರಿ ಮಾರಾಟವಾಗಿದ್ದು ರೈತರ ಮೊಗದಲ್ಲಿ ಸಂತೋಷ ತರಿಸಿದೆ. ಸುಮಾರು ಹತ್ತು ದಿನಗಳಲ್ಲಿ 2.5 ಕೋಟಿ ರೂ ಮೌಲ್ಯದ 200 ಟನ್ ಮಾವು ಮಾರಾಟವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರವೀಂದ್ರ ಹಕಾಟೆ ತಿಳಿಸಿದ್ದಾರೆ.

ಕಡಿಮೆ ದರದಲ್ಲಿ ಮಾವು : ಪ್ರಖ್ಯಾತ ತಳಿಗಳ ಮಾವುಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದ ಪರಿಣಾಮ ಜನರು ಅತ್ಯಂತ ಉತ್ಸಾಹದಿಂದ ಈ ಮಾವು ಮೇಳದಲ್ಲಿ ಪಾಲ್ಗೊಂಡರು. ಮಾರುಕಟ್ಟೆ ಬೆಲೆಗಿಂತ ಸುಮಾರು 30 ಪ್ರತಿಶತ ಕಡಿಮೆ ಬೆಲೆ ಈ ಮಾವು ಮಾರಾಟವಾಗಿದ್ದು ಈ ಬಾರಿಯ ವಿಶೇಷ. ಒಟ್ಟಿನಲ್ಲಿ ಕುಂದಾನಗರಿ ಜನರ ‌ಬಾಯಿ ಸಿಹಿ ಮಾಡಿರುವ ಈ ಮಾವು ಮೇಳ ಸಂಪೂರ್ಣ ಯಶಸ್ವಿಯಾಗಿದ್ದಂತೂ ಸತ್ಯ.

ABOUT THE AUTHOR

...view details