ಕರ್ನಾಟಕ

karnataka

ETV Bharat / state

ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್​ ಕ್ವೀನ್​! - ಬೆಳಗಾವಿ ಜಿಲ್ಲೆ ಹುಕ್ಕೇರಿ

ಕಳೆದ ಕೆಲವು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆ ಕೆ.ಜಿಗೆ 150 ರಿಂದ 200 ರೂಪಾಯಿ ತಲುಪಿದೆ. ಟೊಮೆಟೊ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗಿದ್ದರೆ, ರೈತರಿಗೆ ಮಾತ್ರ ಅನುಕೂಲವಾಗಿದೆ. ಇದರಿಂದ ಇಲ್ಲೊಬ್ಬ ರೈತ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದಾರೆ.

Belagavi farmer get best out of tomato farming
ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಟೊಮೊಟೊ

By

Published : Jul 18, 2023, 6:01 PM IST

ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಟೊಮೆಟೊ

ಚಿಕ್ಕೋಡಿ(ಬೆಳಗಾವಿ): ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯ ಪರಿಸ್ಥಿತಿ ಇತ್ತು. ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ.

ಟೊಮೆಟೊ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದರೆ, ಅನ್ನದಾತರು ಮಾತ್ರ ಖುಷಿಯಾಗಿದ್ದಾರೆ. ಟೊಮೆಟೊ ಬೆಳೆದ ಕೆಲ ರೈತರು ತಾವು ಈವರೆಗ ಕಂಡಿರದಷ್ಟು ಹಣವನ್ನು ಈ ಬೆಲೆ ಏರಿಕೆ ಸೀಸನ್‌ನಲ್ಲಿ ಪಡೆದುಕೊಂಡಿದ್ದಾರೆ. ಅದಕ್ಕೆ ಉದಾಹರಣೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ರೈತ ಮಹೇಶ್ ಹಿರೇಮಠ.

ಅನ್ನದಾತರು ಆರ್ಥಿಕವಾಗಿ ಸಬಲವಾಗಲು ಕೃಷಿಯಲ್ಲಿ ಹಲವಾರು ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಈ ಪ್ರಯತ್ನದಲ್ಲಿ ಹಲವು ಬೆಳೆಗಳು ಕೈ ಕೊಟ್ಟರೂ ಅದೃಷ್ಟಕ್ಕೆ ಒಂದಂತೆ ಕೆಲ ಬೆಳೆಗಳು ಕೈ ಹಿಡಿದು ರೈತರ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ಅದೇ ರೀತಿ ಚಿಕ್ಕೋಡಿ ರೈತನಿಗೆ ಟೊಮೆಟೊ ವರದಾನವಾಗಿದೆ. ಇದರಿಂದ ಆತನ ಅದೃಷ್ಟ ಖುಲಾಯಿಸಿದೆ.

ಇದನ್ನೂ ಓದಿ:ಧಾರವಾಡ: 1 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ₹3 ಲಕ್ಷ ಆದಾಯ ಗಳಿಸಿದ ರೈತ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮಹೇಶ್ ಹಿರೇಮಠ ಎಂಬ ಯುವ ರೈತ ಕಳೆದ ನಾಲ್ಕು ವರ್ಷಗಳಿಂದ ಕೃಷಿ ಕಾಯಕ ಮಾಡುತ್ತ ಬಂದಿದ್ದಾರೆ. ನಾಲ್ಕು ಎಕರೆ ಜಮೀನು ಹೊಂದಿರುವ ಇವರು ಎರಡು ಎಕರೆಯಲ್ಲಿ ಕಬ್ಬು‌ ಬೆಳೆದರೆ, ಇನ್ನೆರಡು ಎಕರೆಯಲ್ಲಿ ತರಕಾರಿ ಬೆಳೆದಿದ್ದಾರೆ. ಅದರಲ್ಲಿ ಈ ವರ್ಷ ಕೇವಲ 20 ಗುಂಟೆ (ಅರ್ಧ ಎಕರೆ) ಜಮೀನಿನಲ್ಲಿ ನರ್ಸರಿಯಿಂದ 3,700 ಟೊಮೆಟೊ ಸಸಿಗಳನ್ನು ತಂದು ನಾಟಿ ಮಾಡಿದ್ದರು.

ಸಸಿ ನಾಟಿ ಮಾಡಿ 45 ದಿನಗಳ ಬಳಿಕ ಟೊಮೆಟೊ ಕೊಯ್ಲು ಆರಂಭಿಸಿದ್ದಾರೆ. 20 ಗುಂಟೆಯಲ್ಲಿ 45 ದಿನಗಳಲ್ಲಿ 20 ಟನ್ 400 ಕೆ.ಜಿಯಷ್ಟು ಟೊಮೆಟೊ ಇಳುವರಿ ಪಡೆದಿದ್ದಾರೆ. ದಿನಕ್ಕೆ 20 ಕೆ.ಜಿ ತೂಕದ 100-120 ಕ್ಯಾರಿಬ್ಯಾಗ್ ಸರಬರಾಜು ಮಾಡಿ ಈವರೆಗೆ 11 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಇದಕ್ಕೆ ಎರಡು ಲಕ್ಷ ರೂ. ಖರ್ಚಾಗಿದೆ. ಈ ಖರ್ಚು ಕಳೆದು ಬರೋಬ್ಬರಿ 9 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ‌.

ಸಂತಸ ವ್ಯಕ್ತಪಡಿಸಿದ ರೈತ:ಕಳೆದ ನಾಲ್ಕು ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ. ಇಷ್ಟು ಆದಾಯ ಹಾಗೂ ಇಷ್ಟೊಂದು ಇಳುವರಿ ಯಾವತ್ತೂ ಬಂದಿಲ್ಲ ಎಂದು ಯುವ ರೈತ ಮಹೇಶ್ ಹಿರೇಮಠ ಸಂತಸ ವ್ಯಕ್ತಪಡಿಸಿದರು.

ಯುವ ರೈತ ಮಹೇಶ್ ಹಿರೇಮಠಗೆ ಮಾರ್ಗದರ್ಶನ ನೀಡಿರುವ ಸುರೇಶ್ ಅಸೋದೆ ಮಾತನಾಡಿ, 'ಮಾರ್ಚ್ ತಿಂಗಳಲ್ಲಿ 20 ಗುಂಟೆ ಜಮೀನಿನಲ್ಲಿ 3,700 ಟೊಮೆಟೊ ಸಸಿ ನಾಟಿ ಮಾಡಿಸಿದ್ದೆ. ಅದಕ್ಕೆ ಪೂರ್ವಭಾವಿಯಾಗಿ ಮಣ್ಣು ಪರೀಕ್ಷೆ ಮಾಡಿ ಅದಕ್ಕೆ ಬೇಕಾದಂತಹ ಗೊಬ್ಬರ, ಕೀಟನಾಶಕ ಸಿಂಪಡಿಸಿದ್ದೆವು. ಸಸಿಗಳಿಗೆ ಬರಬಹುದಾದ ವಿವಿಧ ರೋಗಗಳ ತಡೆಗೆ ಕ್ರಮ ಕೈಗೊಂಡಿದ್ದೆವು. ಮಾರ್ಗದರ್ಶನ ಪ್ರಕಾರ ಮಹೇಶ್ ಹಿರೇಮಠ ಕೃಷಿ ಮಾಡಿದ್ದರಿಂದ ಒಂದು ಟೊಮೆಟೊ ಗಿಡದಲ್ಲಿ 6 ರಿಂದ 7 ಕೆ.ಜಿ ಇಳುವರಿ ಬಂದಿದೆ. ಈಗಾಗಲೇ 20 ಗುಂಟೆಯಲ್ಲಿ 20 ಟನ್‌ಗೂ ಹೆಚ್ಚು ಟೊಮೆಟೊ ಕೊಯ್ಲು ಮಾಡಿದ್ದು, ಇನ್ನೂ ಎರಡು ಟನ್ ಇಳುವರಿ ಆಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:Tomato Tulabharam: ಮಗಳಿಗೆ ಟೊಮೆಟೊ ತುಲಾಭಾರ ಮಾಡಿಸಿದ ಪೋಷಕರು!

ABOUT THE AUTHOR

...view details