ಬೆಳಗಾವಿ :ತಾಲೂಕಿನ ಚೆನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಪರೀಕ್ಷೆಗಳನ್ನು 10 ದಿನಗಳ ಕಾಲ ಮೂಂದುಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸೀಮೆ ಎಣ್ಣೆ ಬಾಟಲ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಸೀಮೆ ಎಣ್ಣೆ ಕ್ಯಾನ್ ಹಿಡಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ ಈ ವೇಳೆ ಚೆನ್ನಮ್ಮ ವಿವಿ ಕುಲಪತಿ ರಾಮಚಂದ್ರೇಗೌಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳನ್ನು ಮನವೊಲಿಸಲು ಪ್ರಯತ್ನಿಸಿದರೂ, ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಡುತ್ತಿಲ್ಲ. ಕುಲಪತಿಗಳೊಂದಿಗೆ ವಾಗ್ವಾದ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮುಂದಕ್ಕೆ ಹಾಕದಿದ್ದರೆ, ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡುತ್ತಿದ್ದಾರೆ.
ತಾಲೂಕಿನ ಭೂತರಾಮನಹಟ್ಟಿ ಬಳಿಯಿರುವ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ 4ನೇ ಸೆಮಿಸ್ಟರ್ ಹಾಗೂ ಬಿಇಡಿ 4ನೇ ಸಮೀಸ್ಟರ್ ಪರೀಕ್ಷೆಗಳನ್ನು ನಾಳೆಯಿಂದ (ಸೆಪ್ಟೆಂಬರ್ 14) ರಿಂದ ನಡೆಸಲು ವಿಶ್ವವಿದ್ಯಾಲಯ ಸಮಯ ನಿಗದಿಪಡಿಸಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿಧ್ಯಾರ್ಥಿಗಳು ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಕುಲಕುಲಪತಿ ರಾಮಚಂದ್ರೆಗೌಡ, ಕುಲಸಚಿ ಬಸವರಾಜ್ ಪದ್ಮಸಾಲಿ ಹಾಗೂ ಮೌಲ್ಯಮಾಪನ ಕುಲ ಸಚಿವ ಎಸ್.ಎಂ.ಹುರಕಡ್ಲಿ ಅವರು ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ನಾತಕೋತ್ತರ ವಿಧ್ಯಾರ್ಥಿಗಳ 3ನೇ ಸೆಮಿಸ್ಟರ್ ಪರೀಕ್ಷೆಗಳು ಆಗಸ್ಟ್ 19 ರಂದು ನಡೆಸಲು ಉದ್ದೇಶಿಸಲಾಗಿದೆ. ಆದರೆ, ವಿವಿ ನಾಲ್ಕನೇ ಸೆಮಿಸ್ಟರ್ ಗೆ ಸಮಯ ನೀಡಿಲ್ಲ. ಇದಲ್ಲದೇ 4ನೇ ಸೆಮಿಸ್ಟರ್ ನ ಪಠ್ಯಕ್ರಮಗಳನ್ನು ಪೂರ್ಣಗೊಳಿಸದೇ ಆರ್ಸಿಯು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ನಾಳೆಯಿಂದ ನಡೆಯುವ ಪರೀಕ್ಷೆಗೆ ವಿಧ್ಯಾರ್ಥಿಗಳು ವಿರೋಧಿಸಲು ಮತ್ತೊಂದು ಮುಖ್ಯ ಕಾರಣವಿದ್ದು, ಸೆ.15, 16ರಂದು ಪಿಎಸ್ಐ ದೈಹಿಕ ಪರೀಕ್ಷೆಗಳು ಹಾಗೂ ಸೆ.18,19ರಂದು ಎಸ್ ಡಿಎ ಪರೀಕ್ಷೆಗಳು ಜರುಗಲಿವೆ. ಚೆನ್ನಮ್ಮ ವಿವಿ ಈಗಾಗಲೇ ಬಿಡುಗಡೆ ಮಾಡಿರುವ ಪರೀಕ್ಷಾ ವೇಳಾಪಟ್ಟಿ ತಡೆಹಿಡಿದು ಮುಂದಕ್ಕೆ ಹಾಕಬೇಕು ಎಂಬುವುದು ವಿಧ್ಯಾರ್ಥಿಗಳು ವಾದವಾಗಿದೆ.