ಚಿಕ್ಕೋಡಿ:ಶಿಕ್ಷಕಿಯನ್ನು ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲಿ ಕ್ಲಾಸಿಗೆ ಹೋಗದೆ ಶಿಕ್ಷಕಿ ಪರವಾಗಿ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡುತ್ತಿದ್ದಾರೆ.
ಶಿಕ್ಷಕಿ ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ - ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಅವರು ಅರ್ಚನಾ ಮೇಡಮ್ಗೆ ಇಲ್ಲಸಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಲೆಯ ವಿದ್ಯಾರ್ಥಿನಿಯರು ಆರೋಪ ಮಾಡುತ್ತಿದ್ದಾರೆ.
![ಶಿಕ್ಷಕಿ ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ belagavi](https://etvbharatimages.akamaized.net/etvbharat/prod-images/768-512-5369036-thumbnail-3x2-bgm.jpg)
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಅರ್ಚನಾ ಸಾಗರ್ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಇದು ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಅವರ ಹುನ್ನಾರ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಎಸ್ಡಿಎಂಸಿ ಅಧ್ಯಕ್ಷರ ಮಗ ಸರಿಯಾಗಿ ಓದುವುದಿಲ್ಲ. ಅದನ್ನು ಅರ್ಚನಾ ಮೇಡಮ್ ಕೇಳಿದ್ದಕ್ಕೆ ಶಿಕ್ಷಕಿ ಅರ್ಚನಾ ಮೇಲೆ ದೌರ್ಜನ್ಯ ಮಾಡುತ್ತಾ ಬಂದಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈಗಾಗಲೇ ಶಿಕ್ಷಕಿ ಅರ್ಚನಾ ಅವರನ್ನು ವರ್ಗಾವಣೆ ಮಡುವುದಾಗಿ ಚಿಕ್ಕೋಡಿ ಡಿಡಿಪಿಐ ಹೇಳಿಕೆ ನೀಡಿದ್ದರು. ಆದರೆ, ಈ ಶಿಕ್ಷಕಿಯ ಬೆನ್ನಿಗೆ ನಿಂತ ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಶಿಕ್ಷಕಿ ಅರ್ಚನಾ ಸಾಗರ್ ಅವರನ್ನು ವರ್ಗಾವಣೆ ಮಾಡದಂತೆ ಪ್ರತಿಭಟನೆ ಮಾಡುತ್ತಿದ್ದಾರೆ.
TAGGED:
ಅರ್ಜುನವಾಡ ಸರ್ಕಾರಿ ಶಾಲೆ