ಬೆಳಗಾವಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಭಯದಿಂದ ಜಿಲ್ಲೆಯಲ್ಲಿ ಮತ್ತೋರ್ವ ವಿದ್ಯಾರ್ಥಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ.
ಬೆಳಗಾವಿ ತಾಲೂಕಿನ ಪಂಥ ಬಾಳೇಂಕುಂದ್ರಿ ಗ್ರಾಮದ ಮೌನೇಶ ಸುತಾರ (16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಜೂನ್ 25 ರಿಂದ ಪರೀಕ್ಷೆ ಆರಂಭವಾಗುತ್ತೆ. ಹೀಗಾಗಿ ಸರಿಯಾಗಿ ಓದುವಂತೆ ಪೋಷಕರು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಬೇಜಾರಾದ ಬಾಲಕ ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾನೆ.