ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮಕ್ಕಳ ಕಳ್ಳರ ಬಗ್ಗೆ ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ.. ಎಸ್​ಪಿ ಡಾ. ಸಂಜೀವ್ ಪಾಟೀಲ - ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು

ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವದಂತಿಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಮತ್ತು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಎಸ್​ಪಿ ಡಾ. ಸಂಜೀವ್ ಪಾಟೀಲ ಮನವಿ ಮಾಡಿದ್ದಾರೆ.

strict-action-against-fake-news-about-child-thieves
ಎಸ್​ಪಿ ಡಾ. ಸಂಜೀವ್ ಪಾಟೀಲ

By

Published : Sep 14, 2022, 12:17 PM IST

ಬೆಳಗಾವಿ : ಜಿಲ್ಲೆಯಲ್ಲಿ ‌ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವಂದತಿ ಹಬ್ಬಿಸಲಾಗುತ್ತಿದ್ದು ಸಾರ್ವಜನಿಕರು ಸುಳ್ಳು ವಂದತಿಗೆ ಕಿವಿಗೊಡಬಾದು. ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಂದತಿ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವದಂತಿ ಹಬ್ಬಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ. ಬೆಳಗಾವಿ ಜಿಲ್ಲೆ ನಾಲ್ಕು ಕಡೆ ಮಕ್ಕಳ ಕಳ್ಳರು ಎಂದು ಜನರಿಂದ ಅಮಾಯಕರಿಗೆ ಥಳಿಸಲಾಗುತ್ತಿದೆ. ಕಿತ್ತೂರು ತಾಲ್ಲೂಕಿನಲ್ಲಿ ಪ್ಲಾಸ್ಟಿಕ್ ಬುಟ್ಟಿ ಮಾರುವವರನ್ನ ಮಕ್ಕಳ ಕಳ್ಳರೆಂದು ಧರ್ಮದೇಟು ನೀಡಲಾಗಿತ್ತು.

ಖಾನಾಪುರ ತಾಲೂಕಿನ ನಂದಗಡದಲ್ಲಿ ಮಾನಸಿಕ ಅಸ್ವಸ್ಥನೊಬ್ಬನ ವರ್ತನೆ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗಿತ್ತು. ಇದಾದ ಬಳಿಕ ನಿನ್ನೆ ಸವದತ್ತಿ ತಾಲೂಕಿನ ಶಿರಸಂಗಿಯಲ್ಲಿ ನಾಗಪುರದಿಂದ ನಾಲ್ವರು ಆಶ್ರಮಕ್ಕೆ ಡೋನೆಶನ್ ಕೇಳಲು ಬಂದವರ ಬಗ್ಗೆಯೂ ಸಂಶ ವ್ಯಕ್ತವಾಗಿತ್ತು.‌ ಇನ್ನು, ಗೋಕಾಕ್​ ತಾಲೂಕಿನ ಕುಲಗೋಡದಲ್ಲಿ ನಾಗಾ ಸಾಧನಗಳನ್ನು ಮಕ್ಕಳ ಕಳ್ಳರೆಂದು ಶಂಕೆ ವ್ಯಕ್ತಪಡಿಸಲಾಗಿತ್ತು.

ಬೆಳಗಾವಿಯಲ್ಲಿ ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ

ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮಕ್ಕಳ ಕಳ್ಳತನ ಪ್ರಕರಣ ದಾಖಲಾಗಿಲ್ಲ. ಸಾರ್ವಜನಿಕ ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಹಾಗೇನಾದರೂ ಗ್ರಾಮದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದ್ರೆ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಡಾ.ಸಂಜೀವ ಪಾಟೀಲ್ ಹೇಳಿದರು.

ಇದನ್ನೂ ಓದಿ:ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳ ಮೇಲೆ ಹಲ್ಲೆ.. ಗ್ರಾಮಸ್ಥರ ಕ್ರಮಕ್ಕೆ ಖಂಡನೆ - ವಿಡಿಯೋ

ABOUT THE AUTHOR

...view details