ಕರ್ನಾಟಕ

karnataka

ETV Bharat / state

ಕುರಿದೊಡ್ಡಿ ಮೇಲೆ ಬೀದಿನಾಯಿಗಳ ದಾಳಿ: 60ಕ್ಕೂ ಹೆಚ್ಚು ಕುರಿಗಳು ಸಾವು - ಬೀದಿ ನಾಯಿ ಹಾವಳಿ

ಬೀದಿನಾಯಿಗಳು ಕುರಿ ದೊಡ್ಡಿ ಮೇಲೆ ದಾಳಿ ನಡೆಸಿರುವ ಪರಿಣಾಮ 60ಕ್ಕೂ ಹೆಚ್ಚು ಕುರಿಗಳು ಪ್ರಾಣಬಿಟ್ಟಿವೆ. ರಾತ್ರಿ ವೇಳೆ ದಾಳಿ ನಡೆಸಿದ್ದು, ಕುರಿಗಳನ್ನು ಕಳೆದುಕೊಂಡ ರೈತ ಕಣ್ಣೀರಿಟ್ಟಿದ್ದಾರೆ.

street-dogs-killed-more-than-60-sheep-at-athani
ಕುರಿದೊಡ್ಡಿ ಮೇಲೆ ಬೀದಿನಾಯಿಗಳ ದಾಳಿ

By

Published : Aug 24, 2021, 10:11 AM IST

ಅಥಣಿ (ಬೆಳಗಾವಿ): ಕುರಿದೊಡ್ಡಿ ಮೇಲೆ ಬೀದಿನಾಯಿಗಳ ದಾಳಿಯಿಂದಾಗಿ 60ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಅಥಣಿಯ ಹುಲಗಬಾಳ ಗ್ರಾಮದಲ್ಲಿ ನಡೆದಿದೆ. ಸಖಾರಾಮ್ ಅಪ್ಪಾಸಾಬ ಕಾರ್ಯೆ ಎಂಬುವರಿಗೆ ಸೇರಿದ ಕುರಿದೊಡ್ಡಿಯಲ್ಲಿ ತಡರಾತ್ರಿ 2 ಗಂಟೆಯ ಆಸುಪಾಸಿನಲ್ಲಿ ಘಟನೆ ನಡೆದಿದೆ.

ದೊಡ್ಡಿಯಲ್ಲಿ 150ಕ್ಕೂ ಹೆಚ್ಚು ಕುರಿ ಹಾಗೂ ಆಡುಗಳನ್ನು ಸಾಕಿರುವ ರೈತ, ನಾಯಿಗಳ ದಾಳಿಯಿಂದ 20 ಕುರಿ, 18 ಮೇಕೆ, 25ಕ್ಕೂ ಹೆಚ್ಚು ಆಡಿನ ಮರಿಗಳನ್ನು ಕಳೆದುಕೊಂಡಿದ್ದಾನೆ.

ನಾಯಿಗಳ ದಾಳಿ ಸಮಯದಲ್ಲಿ ಕುರಿಗಳನ್ನು ಕಾಪಾಡಿಕೊಳ್ಳಲು ರೈತರು ಎರಡು ನಾಯಿಗಳನ್ನು ಹೊಡೆದು ಸಾಯಿಸಿದ್ದಾರೆ. ಕುರಿಗಳನ್ನು ಕಳೆದುಕೊಂಡ ರೈತ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತುಮಕೂರು:ವಿದ್ಯುತ್ ತಂತಿ ತುಂಡಾಗಿ ಮೇಲೆ ಬಿದ್ದ ಪರಿಣಾಮ ಓರ್ವ ಮಹಿಳೆ ಸೇರಿ 4 ಎಮ್ಮೆ ಸಾವು..

ABOUT THE AUTHOR

...view details