ಚಿಕ್ಕೋಡಿ : ಬೀದಿ ನಾಯಿಗಳ ದಾಳಿಯಿಂದ 20 ಕುರಿಗಳು ಮೃತಪಟ್ಟಿರುವ ಘಟನೆತಾಲೂಕಿನ ಹುನ್ನರಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಬೀದಿ ನಾಯಿಗಳ ದಾಳಿ : 20 ಕುರಿಗಳು ಸಾವು - dog
ಬಿಡಾಡಿ ನಾಯಿಗಳು ಕುರಿ ಹಿಂಡಿನಲ್ಲಿ ನುಗ್ಗಿ ದಾಳಿ ನಡೆಸಿರುವ ಘಟನೆ ಹುನ್ನರಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಕುರಿ
ಸುರೇಶ ವಾಸು ಗೋರಡೆ ಎಂಬುವರಿಗೆ ಸೇರಿದಕುರಿಗಳು ಇದಾಗಿದ್ದು, ವೇದಗಂಗಾ ನದಿ ಬಳಿಯ ಹೊಲದಲ್ಲಿ ಕುರಿಗಳನ್ನು ಸುತ್ತಮುತ್ತ ಜಾಳಿಗೆ ಹಾಕಿ ಮೇವಿಗಾಗಿ ಒಂದಡೆ ಇರಿಸಲಾಗಿತ್ತು. ವೇದಗಂಗಾ ನದಿ ಬತ್ತಿ ಹೋಗಿದ್ದರಿಂದ ಗಳತಗಾ ಗ್ರಾಮದ ಕಡೆಯಿಂದ ನದಿ ಪಾತ್ರದ ಮೂಲಕ 4 ಬಿಡಾಡಿ ನಾಯಿಗಳು ಬಂದು ಕುರಿ ಹಿಂಡಿನಲ್ಲಿ ನುಗ್ಗಿ ದಾಳಿ ನಡೆಸಿವೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಮಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.