ಅಥಣಿ: ಸಾರಿಗೆ ನೌಕರರು ವಿವಿಧ ಬೇಡಿಕೆ ಹಾಗೂ 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಇವತ್ತಿಗೆ 8ನೇ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದ್ದು, ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರೂರಲ್ಲಿ ಕೆಲವು ಬಸ್ ಸಂಚಾರ ಪ್ರಾರಂಭವಾಗಿದ್ದರಿಂದ ಇದನ್ನು ಕಿಡಿಗೇಡಿಗಳು ಸಹಿಸದೆ ಬಸ್ಗೆ ಕಲ್ಲೆಸೆದಿದ್ದಾರೆ. ಆದರೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಥಣಿ ಜಮಖಂಡಿ ಮಾರ್ಗವಾಗಿ ಬಸ್ ಸಂಚಾರ ಪ್ರಾರಂಭವಾಗಿತ್ತು. ಜಮಖಂಡಿ ತಾಲೂಕಿನಿಂದ ಅಥಣಿಗೆ ಬರುವ ಸಂದರ್ಭದಲ್ಲಿ ಸವದಿ ಕ್ರಾಸ್ ಬಳಿ ಕಿಡಿಗೇಡಿಗಳು ಬಸ್ನ ಮುಂಭಾಗಕ್ಕೆ ಕಲ್ಲು ಎಸೆದಿದ್ದಾರೆ. ಇದರ ಪರಿಣಾಮವಾಗಿ ಗಾಜು ಪುಡಿ ಪುಡಿಯಾಗಿ ಚಾಲಕನ ಕೈಗೆ ತಾಗಿ ಪೆಟ್ಟಾಗಿದೆ.