ಕರ್ನಾಟಕ

karnataka

ETV Bharat / state

ಬೆಳಗಾವಿ: ನ.23 ರಿಂದ 3 ದಿನ ರಾಜ್ಯಮಟ್ಟದ ಅರಣ್ಯ ಇಲಾಖೆ ಕ್ರೀಡಾಕೂಟ - CM drives state forest department to sports event

ಬೆಳಗಾವಿಯಲ್ಲಿ ನವೆಂಬರ್ 23 ರಿಂದ ಮೂರು ದಿನಗಳ ಕಾಲ ರಾಜ್ಯಮಟ್ಟದ ಅರಣ್ಯ‌ ಇಲಾಖೆ ಕ್ರೀಡಾಕೂಟ ನಡೆಯಲಿದೆ.

Chief Conservator of Forest Manjunath Chavan
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ

By

Published : Nov 21, 2022, 7:37 AM IST

ಬೆಳಗಾವಿ:ನವೆಂಬರ್ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಬೆಳಗಾವಿ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.

ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಕೂಟದಲ್ಲಿ ರಾಜ್ಯದ 13 ಅರಣ್ಯ ವೃತ್ತಗಳ ಮತ್ತು ಒಂದು ತರಬೇತಿ ಅಕಾಡೆಮಿಯ ಒಟ್ಟು 14 ಅರಣ್ಯ ಯುನಿಟ್‌ಗಳ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಒಟ್ಟು 1,100 ಕ್ರೀಡಾಪಟುಗಳು ಈಗಾಗಲೇ ತಮ್ಮ ಹೆಸರು ನೋಂದಾಯಿಸಿದ್ದಾರೆ. 900 ಪುರುಷ ಕ್ರೀಡಾಪಟುಗಳು ಹಾಗೂ 200 ಮಹಿಳಾ ಕ್ರೀಡಾಪಟುಗಳು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು) ಕ್ಯಾಂಪಸ್‌ನಲ್ಲಿ ಮತ್ತು ಬೆಳಗಾವಿ ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ಇಲಾಖೆಯ ಸಿಪಾಯಿ, ಪಾರೆಸ್ಟರ್ ದರ್ಜೆಯ ಸಿಬ್ಬಂದಿಯಿಂದ ಹಿಡಿದು ಇಲಾಖೆ ಮುಖ್ಯಸ್ಥರಾದ ಪಿಸಿಸಿಎಫ್‌ವರೆಗೂ ಎಲ್ಲ ಅಧಿಕಾರಿಗಳು ಕ್ರೀಡೆಯಲ್ಲಿ ಭಾಗವಹಿಸುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ‘ಲೋಗೊ’ವನ್ನು ಸಿಸಿಎಫ್ ಮಂಜುನಾಥ ಚವ್ಹಾಣ್ ಬಿಡುಗಡೆಗೊಳಿಸಿದರು.

ಇದನ್ನೂ ಓದಿ:ವಾರ್ಷಿಕ ಕ್ರೀಡಾಕೂಟ: ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಮರ್ಥ್ಯ ಪ್ರದರ್ಶಿಸಿದ 900 ಪೊಲೀಸರು

ABOUT THE AUTHOR

...view details