ಚಿಕ್ಕೋಡಿ : ಕೃಷ್ಣಾ ನದಿ ಪ್ರವಾಹದಿಂದ ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ - ಶಿರಗುಪ್ಪಿ ರಸ್ತೆಯ ಸಂಚಾರ ಸ್ಥಗಿತಗೊಂಡಿದೆ.
ಕೃಷ್ಣೆ ಪ್ರವಾಹಕ್ಕೆ ಕೊಚ್ಚಿ ಹೋದ ರಾಜ್ಯ ಹೆದ್ದಾರಿ: ರಸ್ತೆ ಸಂಚಾರ ಅಸ್ತವ್ಯಸ್ತ - Flood in Karnataka
ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಮಾಂಜರಿ-ಶಿರಗುಪ್ಪಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.
![ಕೃಷ್ಣೆ ಪ್ರವಾಹಕ್ಕೆ ಕೊಚ್ಚಿ ಹೋದ ರಾಜ್ಯ ಹೆದ್ದಾರಿ: ರಸ್ತೆ ಸಂಚಾರ ಅಸ್ತವ್ಯಸ್ತ](https://etvbharatimages.akamaized.net/etvbharat/prod-images/768-512-4167661-thumbnail-3x2-flood.jpg)
ಕೃಷ್ಣೆ ಪ್ರವಾಹಕ್ಕೆ ಕೊಚ್ಚಿ ಹೋದ ರಾಜ್ಯ ಹೆದ್ದಾರಿ
ಕೃಷ್ಣೆ ಪ್ರವಾಹಕ್ಕೆ ಕೊಚ್ಚಿ ಹೋದ ರಾಜ್ಯ ಹೆದ್ದಾರಿ
ಸುಮಾರು 200 ಅಡಿಯಷ್ಟು ರಸ್ತೆ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಚಿಕ್ಕೋಡಿಯಿಂದ ವಿಜಯಪುರ, ಕಾಗವಾಡ, ಅಥಣಿ ತಾಲೂಕುಗಳು ಹಾಗೂ ಮಹಾರಾಷ್ಟ್ರದ ಮಿರಜ್, ಸಾಂಗಲಿ, ಪಟ್ಟಣದ ಮಾರ್ಗಗಳು ಕಡಿತಗೊಂಡು ಸಂಚಾರ ಅಸ್ತವ್ಯಸ್ತವಾಗಿದೆ. ಹೀಗಾಗಿ ಸುಮಾರು 80 ಕಿಲೋಮೀಟರ್ ರಸ್ತೆ ಸುತ್ತು ಹಾಕಿ ಸಂಚಾರ ಮಾಡುವ ಪರಿಸ್ಥಿತಿ ಗಡಿ ಭಾಗದ ಜನರಿಗೆ ಬಂದೊದಗಿದೆ.