ಕರ್ನಾಟಕ

karnataka

ETV Bharat / state

ವರ್ಷ ಕಳೆದರೂ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಯುವಕನ ಕುಟುಂಬಕ್ಕೆ ಸಿಗದ ಪರಿಹಾರ! - ಬಸವರಾಜ ಮಾನಿಕ್ ಕಾಂಬಳೆ

ಕಳೆದ ಬಾರಿ ಕೃಷ್ಣಾ ನದಿಯ ಪ್ರವಾಹದಲ್ಲಿ ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಸವರಾಜ ಮಾನಿಕ್ ಕಾಂಬಳೆ (19)ಎಂಬ ಯುವಕ ಸಿಲುಕು ಸಾವಿಗೀಡಾಗಿದ್ದರು. ಆದರೆ ಯುವಕ ಮೃತಪಟ್ಟು ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಪರಿಹಾರ ನೀಡದೆ ಸತಾಯಿಸುತ್ತಿದೆ ಎಂದು ಬಸವರಾಜ ತಾಯಿ ಲಲಿತಮ್ಮ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

state government has not given flood relief : allegation
ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಯುವಕನಿಗೆ ಪರಿಹಾರ ನೀಡದ ರಾಜ್ಯ ಸರ್ಕಾರ

By

Published : Aug 9, 2020, 2:18 PM IST

ಅಥಣಿ: ತಾಲೂಕಿನಲ್ಲಿ ಕಳೆದ ವರ್ಷದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಅಥಣಿ ತಾಲೂಕಿನ ಜನರು ಹೈರಾಣಾಗಿದ್ದರು. ಪ್ರವಾಹದ ರಭಸಕ್ಕೆ ಸಿಲುಕಿದ ತಾಲೂಕಿನ ಓರ್ವ ಯುವಕ ಮೃತಪಟ್ಟು ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಪರಿಹಾರ ನೀಡದೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಪ್ರವಾಹದಲ್ಲಿ ಸಿಲುಕಿ ಮೃತಪಟ್ಟ ಯುವಕನಿಗೆ ಪರಿಹಾರ ನೀಡದ ರಾಜ್ಯ ಸರ್ಕಾರ..

ನದಿಯಲ್ಲಿ ನೀರಿನ ಪ್ರಮಾಣ ಅಧಿಕವಾಗುತ್ತಿದ್ದಂತೆ ಕುಟುಂಬದ ಜೊತೆ ಸರಕ್ಷಿತ ಸ್ಥಳಕ್ಕೆ ತೆರಳುವ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಸವರಾಜ ಮಾನಿಕ್ ಕಾಂಬಳೆ (19)ಎಂಬ ಯುವಕ ಕುಟುಂಬ ಸದಸ್ಯರ ಕಣ್ಣುಮುಂದೆ ಕೃಷ್ಣೆ ಪಾಲಾಗಿದ್ದರು. ಎನ್​ಡಿಆರ್​ಎಫ್ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಜೊತೆಯಾಗಿ ಒಂದು ತಿಂಗಳ ಸತತ ಪ್ರಯತ್ನ ಹುಡುಕಾಟದ ನಂತರ ಕಬ್ಬಿನ ತೋಟದಲ್ಲಿ ಅಸ್ಥಿಪಂಜರವಾಗಿ ಶವ ದೊರಕ್ಕಿತ್ತು.

ತಾಲೂಕು ಆಡಳಿತ ಪ್ರಕರಣವನ್ನು ದಾಖಲಿಸಿಕೊಂಡು, ಮೃತನ ತಾಯಿ ಹಾಗೂ ಮೃತನ ಡಿಎನ್ಎ ಟೆಸ್ಟ್​​ಗೆ ಒಳಪಡಿಸಿ ವರದಿ ಬಂದ ಮೇಲೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಬಸವರಾಜ ಮೃತಪಟ್ಟ್ಟು ಒಂದು ವರ್ಷವಾದರೂ ಇನ್ನು ಒಂದೇ ಒಂದು ರೂಪಾಯಿ ಪರಿಹಾರ ಹಣ ನೀಡಿಲ್ಲ ಎಂದು ಬಸವರಾಜ ತಾಯಿ ಲಲಿತಮ್ಮ ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ವಿಷಕ್ಕೆ ಸಂಬಂಧಿಸಿದಂತೆ ಅಥಣಿ ತಹಶೀಲ್ದಾರ್ ಅವರನ್ನು ವಿಚಾರಿಸಿದರೆ, ಆರೋಗ್ಯ ಇಲಾಖೆಯಿಂದ ನಮಗೆ ಡಿಎನ್ಎ ಪರೀಕ್ಷೆ ವರದಿ ಬಂದಿಲ್ಲ. ವರದಿ ಬಂದ ತಕ್ಷಣ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಕೃಷ್ಣಾ ನದಿ ಪ್ರವಾಹ ಸಮೀಕ್ಷೆ ಮಾಡಲು ಅಥಣಿಗೆ ಬಂದಾಗ ಅಧಿಕಾರಿಗೆ ಪ್ರವಾಹದಲ್ಲಿ ಮೃತಪಟ್ಟವರ ಬಾಲಕ ಕುಟುಂಬಕ್ಕೆ ತಕ್ಷಣ 5 ಲಕ್ಷ ಪರಿಹಾರ ನೀಡಿ ಎಂದು ಆದೇಶ ನೀಡಿದ್ದರು. ಆದರೆ ಆದೇಶ ನೀಡಿ ಒಂದು ವರ್ಷ ಕಳೆದರೂ ಪ್ರವಾಹದಲ್ಲಿ ಮೃತಪಟ್ಟ ಕುಟುಂಬಕ್ಕೆ ಇನ್ನು ಪರಿಹಾರ ನೀಡದೇ ಇರುವುದು ಸರ್ಕಾರದ ಆಡಳಿತ ವರ್ಗ ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ ಎಂದು ಸ್ಥಳೀಯರಾದ ಪ್ರಭು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details