ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್ 2021-22 : ಹೀಗಿವೆ ಅಥಣಿ ​ಜನರ ನಿರೀಕ್ಷೆ - Athani

ಇದೇ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರಾರಂಭ ಮಾಡುವಂತೆ ಹಾಗೂ ಪೂರ್ಣ ಪ್ರಮಾಣದ ಕೆಲಸಕ್ಕೆ ಸರಿ ಸುಮಾರು 70 ಕೋಟಿ ರೂ. ಅವಶ್ಯಕತೆ ಇರುವುದರಿಂದ ಬಜೆಟ್​​ನಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಅಥಣಿ ಜನರ ಮನವಿ..

Athani
ರಾಜ್ಯ ಬಜೆಟ್ 2021-22: ಹೀಗಿವೆ ಅಥಣಿ ​ಜನರ ನಿರೀಕ್ಷೆ

By

Published : Mar 1, 2021, 10:23 AM IST

ಅಥಣಿ :ಮಾ.4ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್​ ಬಗ್ಗೆ ಅಥಣಿ ಜನತೆ ಹಲವಾರು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

ರಾಜ್ಯ ಬಜೆಟ್ 2021-22.. ಹೀಗಿವೆ ಅಥಣಿ ​ಜನರ ನಿರೀಕ್ಷೆ..

ಈ ಬಗ್ಗೆ ಈಟಿವಿ ಭಾರತದೊಂದಿಗೆ ಕೆಲವರು ಮಾಹಿತಿ ಹಂಚಿಕೊಂಡಿದ್ದಾರೆ. 2019ರ ಕೃಷ್ಣಾ ನದಿ ಪ್ರವಾಹದಿಂದ ನೆರೆ ಸಂತ್ರಸ್ತರಿಗೆ ಸರಿಯಾದ ರೀತಿ ಈವರೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.

ಈ ಬಜೆಟ್​ನಲ್ಲಾದರೂ ಕೃಷ್ಣಾ ತೀರದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಮಹಿಷವಾಡಗಿ ರಬಕವಿ ಅಡ್ಡಲಾಗಿ ಕೃಷ್ಣಾ ನದಿಗೆ ಬ್ರಿಡ್ಜ್ ಕಾರ್ಯ ತುಂಬಾ ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದ್ದು, ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದ್ದಾರೆ.

ಕೃಷಿ, ನೀರಾವರಿಗೆ ಆದ್ಯತೆ ನೀಡಬೇಕು :ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕು ತುಂಬಾ ವಿಸ್ತಾರವಾಗಿದೆ. ಒಂದು ಕಡೆ ಕೃಷ್ಣಾ ನದಿ ಹರಿದರೆ ಇನ್ನುಳಿದ 60 ಹಳ್ಳಿಗಳು ಮಳೆ ಆಶ್ರಿತ ಭೂ ಭಾಗದಿಂದ ಕೂಡಿವೆ. ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರೊಂದಿಗೆ ಕೋಟ್ಟಲಗಿ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಆದಷ್ಟು ಬೇಗ ಜಾರಿಗೊಳಿಸಲು ಆಗ್ರಹಿಸಿದರು.

ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಿ :ಅಥಣಿ ಪಟ್ಟಣ ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿರುವ ಗಡಿ ತಾಲೂಕು. ಅನೇಕ ಆಮದು ರಪ್ತು ವ್ಯವಹಾರ ಇರುವುದರಿಂದ ರೈತರಿಗೆ ಸುಮಗ ಸಂಚಾರ ವ್ಯವಸ್ಥರಯಿಲ್ಲದೆ ಪರದಾಡುವಂತಾಗಿದೆ. ಇನ್ನು, ತಾಲೂಕಿನಲ್ಲಿ ಕೆಲವು ಗ್ರಾಮಗಳಿಗೆ ಸರಿಯಾದ ರಸ್ತೆಯಿಲ್ಲದೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವು ನೋವು ಸಂಭವಿಸಿವೆ. ಹಾಗಾಗಿ, ಬಜೆಟ್​​ನಲ್ಲಿ ಅಥಣಿ ತಾಲೂಕಿನ ರಸ್ತೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂಬ ಕೂಗು ಜೋರಾಗಿದೆ.

ಅಥಣಿ ಪ್ರತ್ಯೇಕ ಜಿಲ್ಲೆ ರಚನೆಗೆ ಒತ್ತಾಯ :ಬೆಳಗಾವಿ ಜಿಲ್ಲೆ ಕರ್ನಾಟದಲ್ಲಿ ಅತಿ ವಿಸ್ತಾರವಾದ ಜಿಲ್ಲೆ. ಇದರಲ್ಲಿ ಅಥಣಿ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ರಚಿಸುವಂತೆ ದಶಕಗಳಿಂದ ಕೂಗು ವ್ಯಾಪಕವಾಗಿದೆ. ಸದ್ಯ ವಿದ್ಯಾರ್ಥಿಗಳು ಹತ್ತು ಸಾವಿರ ಪತ್ರ ಸರ್ಕಾರಕ್ಕೆ ಕಳಿಸಲು ಚಳವಳಿಗೆ ಧುಮುಕಿದ್ದಾರೆ.

ಪ್ರಾಚೀನ ದೇವಸ್ಥಾನಗಳ ಸಂರಕ್ಷಣೆಗೆ ಆಗ್ರಹ :ಅಥಣಿ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಇತಿಹಾಸ ಪರಂಪರೆ ಬಿಂಬಿಸುವ ಪ್ರಾಚೀನ ಕಾಲದ ದೇವಸ್ಥಾನ, ಶಿಲಾ ಶಾಸನಗಳಿವೆ. ನಮ್ಮ ಸಂಸ್ಕೃತಿ ಬಿಂಬಿಸುವ ಈ ದೇವಾಲಯಗಳನ್ನು ಸಂರಕ್ಷಣೆ ಮಾಡಬೇಕು ಹಾಗೂ ಇತಿಹಾಸ ಪರಂಪರೆಯನ್ನು ಹೊಂದಿರುವ ರಾಮತೀರ್ಥ ಗ್ರಾಮದ ಸ್ವಯಂ ಭೂ ಉಮಾ ರಾಮೇಶ್ವರ ದೇವಾಲಯವನ್ನು ಪ್ರವಾಸಿ ತಾಣವೆಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಅಥಣಿ ಮಾರ್ಗವಾಗಿ ರೈಲ್ವೆ ಯೋಜನೆ :ಕೆಲವೇ ಕೆಲವು ಅಂತರದಲ್ಲಿ ಶೇಡಬಾಳ ಹಾಗೂ ವಿಜಯಪುರ ಇದ್ದರು ಅಥಣಿಗೆ ರೈಲು ಯೋಜನೆ ಇಲ್ಲದೆ ಇಲ್ಲಿನ ಪ್ರಯಾಣಿಕರು, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಶೇಡಬಾಳ ವಿಜಯಪುರ 112 ಕಿ.ಮೀ. ಅಥಣಿ ಮಾರ್ಗವಾಗಿ ನೂತನ ರೈಲು ಯೋಜನೆ ರೂಪಿಸುವಂತೆ ಹಾಗೂ ಭೂ ಸ್ವಾಧೀನಕ್ಕೆ ಸರ್ಕಾರ ಈ ಬಜೆಟ್​​ನಲ್ಲಿ ಹಣವನ್ನು ಮೀಸಲಿುಡುವಂತೆ ಒತ್ತಾಯಿಸಿದರು.

ಕೋಕಟನೂರ ಮಹಾ ಪಶು ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಒತ್ತು :ಶಿವಯೋಗಿಗಳ ನಾಡು ಅಥಣಿ ಜನರ ಬಹುದಿನದ ಕನಸು ಕೋಕಟನೂರ ಮಹಾ ಪಶು ಕಾಲೇಜು. 2012ರಲ್ಲಿ ಕೆಲಸ ಪ್ರಾರಂಭಿಸಿ, ಸತತ 10 ವರ್ಷಗಳಿಂದ ಆಮೆಗತಿಯಲ್ಲಿ ಕಾರ್ಯ ಸಾಗುತ್ತಿದೆ. ತ್ವರಿತ ಗತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕಿದೆ.

ಇದೇ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರಾರಂಭ ಮಾಡುವಂತೆ ಹಾಗೂ ಪೂರ್ಣ ಪ್ರಮಾಣದ ಕೆಲಸಕ್ಕೆ ಸರಿ ಸುಮಾರು 70 ಕೋಟಿ ರೂ. ಅವಶ್ಯಕತೆ ಇರುವುದರಿಂದ ಬಜೆಟ್​​ನಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಅಥಣಿ ಜನರು ಮಾಧ್ಯಮದ ಮುಖಾಂತರ ಮನವಿ ಮಾಡಿದ್ದಾರೆ.

ABOUT THE AUTHOR

...view details