ಅಥಣಿ/ಬೆಳಗಾವಿ:ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಅನರ್ಹ ಶಾಸಕರನ್ನು ವಿಭೀಷಣನಿಗೆ ಹೋಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ - state bjp president nalin kumar kateel visits athani
ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕೈಗೊಂಡ ಸಮಯದಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಇಂದಿನ ರಾಜಕೀಯವನ್ನು ರಾಮಾಯಣದ ಪಾತ್ರಗಳ ಅಮೂಲಕ ವಿವರಿಸಿದ್ರು. ಹನುಮಂತ ಲಂಕೆಗೆ ಹೋದಾಗ ಅಲ್ಲಿ ರಾಮನ ಜಪ ಮಾಡುವ ವಿಭೀಷಣ ಕಂಡಿದ್ದ. ರಾವಣನ ರಾಜ್ಯದಲ್ಲಿದ್ದುಕೊಂಡೇ ವಿಭೀಷಣ ರಾಮನ ಜಪ ಮಾಡುತ್ತಿದ್ದ. ಆ ಮೂಲಕ ರಾಮನ ಪಕ್ಷವನ್ನು ಸೇರಿದ ಮೊದಲ ವ್ಯಕ್ತಿ ವಿಭೀಷಣ. ಈಗ ನಮ್ಮ ರಾಜ್ಯದಲ್ಲಿ ಇಂತಹುದೇ ರಾಮನ ರೀತಿಯ ರಾಜಕಾರಣ ನಡೆಯುತ್ತಿದೆ.
ಯಡಿಯೂರಪ್ಪ ಸಿಎಂ ಆಗಲಿ ಅಂತಾ ಜನ 104 ಸ್ಥಾನ ಕೊಟ್ಟಿದ್ರು. ಆದರೆ ಕುಟುಂಬ ಹಿನ್ನೆಲೆ ಪಕ್ಷ ಮತ್ತು ವಂಶ ಆಡಳಿತ ಹಿನ್ನೆಲೆಯುಳ್ಳ ಪಕ್ಷ ಸೇರಿ ಮೈತ್ರಿ ಸರ್ಕಾರ ಮಾಡಿದರು. ಅವರು ಸಿಎಂ ಕಚೇರಿಯಲ್ಲಿ ಮೈತ್ರಿ ಸರ್ಕಾರ ನಡೆಸಿರಲಿಲ್ಲ. ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಅವರ ಸರ್ಕಾರ ನಡೀತಾ ಇತ್ತು. ಮೈತ್ರಿ ಸರ್ಕಾರದ ಸಿಎಂ ಕೆಲ ಶಾಸಕರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಅದಕ್ಕಾಗಿಯೇ ಅವರೆಲ್ಲ ಆ ಪಕ್ಷ ಬಿಡಬೇಕಾಯಿತು ಎಂದ್ರು. ಕರ್ನಾಟಕದ ಕಲ್ಯಾಣಕ್ಕಾಗಿ 17 ಶಾಸಕರು ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದಾರೆ. ಅವರು ಅಧಿಕಾರಕ್ಕಾಗಿ ನಮ್ಮ ಪಕ್ಷಕ್ಕೆ ಬಂದಿಲ್ಲ. ಅಭಿವೃದ್ಧಿಗಾಗಿ ಬಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಯಾವುದೇ ಉತ್ತರ ನೀಡಿದೆ ನಗುತ್ತಾ ಮುಂದೆ ಸಾಗಿದರು.