ಬೆಳಗಾವಿ: ಗುಜರಾತಿನ ಅಹ್ಮದಾಬಾದ್‌ನಿಂದ ಸ್ಟಾರ್ ಏರ್‌ಲೈನ್ಸ್ ಫ್ಲೈಟ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಹ್ಮದಾಬಾದ್‌ನಿಂದ ಬೆಳಗಾವಿ ಏರ್‌ಪೋರ್ಟ್‌ಗೆ ಒಟ್ಟು 19 ಪ್ರಯಾಣಿಕರು ಬಂದಿಳಿದರು.
19 ಪ್ರಯಾಣಿಕರನ್ನು ಹೊತ್ತು ಗುಜರಾತಿನಿಂದ ಬೆಳಗಾವಿಗೆ ಬಂದ ಸ್ಟಾರ್ ಏರ್‌ಲೈನ್ಸ್ - ಸ್ಟಾರ್ ಏರ್‌ಲೈನ್ಸ್ ಫ್ಲೈಟ್
19 ಜನರ ಪೈಕಿ 8 ಪ್ರಯಾಣಿಕರು ಬೆಳಗಾವಿ ಜಿಲ್ಲೆಯವರು, ನಾಲ್ವರು ದಾವಣಗೆರೆ, 7 ಪ್ರಯಾಣಿಕರು ಹುಬ್ಬಳ್ಳಿ-ಧಾರವಾಡದವರು ಎಂದು ತಿಳಿದು ಬಂದಿದೆ.
19 ಜನರ ಪೈಕಿ 8 ಪ್ರಯಾಣಿಕರು ಬೆಳಗಾವಿ ಜಿಲ್ಲೆಯವರು, ನಾಲ್ವರು ದಾವಣಗೆರೆ, 7 ಪ್ರಯಾಣಿಕರು ಹುಬ್ಬಳ್ಳಿ-ಧಾರವಾಡದವರು ಎಂದು ತಿಳಿದು ಬಂದಿದೆ. ದಾವಣಗೆರೆಯ ನಾಲ್ವರು, ಹುಬ್ಬಳ್ಳಿ ಧಾರವಾಡದ 7 ಪ್ರಯಾಣಿಕರನ್ನು ಅವರವರ ಜಿಲ್ಲೆಗಳಿಗೆ ರವಾನಿಸಲಾಯಿತು. ಈ ಬಗ್ಗೆ ಆಯಾ ಜಿಲ್ಲಾಡಳಿತಕ್ಕೆ ಬೆಳಗಾವಿ ಜಿಲ್ಲಾಡಳಿತ ಮಾಹಿತಿ ನೀಡಿತು.
ಅಹ್ಮದಾಬಾದ್‌ನಿಂದ ಬಂದ ಎಲ್ಲರಿಗೂ 14 ದಿನಗಳ ಕ್ವಾರಂಟೈನ್ ಇರಿಸಲಾಗುತ್ತಿದೆ. ಕ್ಲಿಯರೆನ್ಸ್ ಪಾಸ್ ಜೊತೆಗೆ ಪ್ರತಿಯೊಬ್ಬರ ಪ್ರಯಾಣಿಕರ ಮುಂಗೈ ಮೇಲೆ ಸೀಲ್ ಹಾಕಲಾಯಿತು. ಬೆಳಗಾವಿಗೆ ಆಗಮಿಸಿದ ಪ್ರಯಾಣಿಕರಿಗೆ ಹೋಟೆಲ್‌ಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಯಿತು. ಏರ್‌ಪೋರ್ಟ್‌ನಿಂದ ಸಿಪಿಎಡ್ ಮೈದಾನಕ್ಕೆ ತೆರಳಿ ಮತ್ತೊಮ್ಮೆ ದಾಖಲಾತಿ ಪರಿಶೀಲಿಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಸಿಪಿಎಡ್ ಮೈದಾನದಿಂದ ಕ್ವಾರಂಟೈನ್‌ನಲ್ಲಿರುವ ಹೋಟೆಲ್‌ಗಳಿಗೆ ತೆರಳಲು ವ್ಯವಸ್ಥೆ ಮಾಡಲಾಯಿತು.