ಬೆಳಗಾವಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಬೆನ್ನಿಗೆ ಮಾರಕಾಸ್ತ್ರದಿಂದ ಇರಿದು, ಬಳಿಕ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದಿರುವ ಘಟನೆ ತಾಲೂಕಿನ ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.
ಶಿವಾಜಿ ನಗರ ನಿವಾಸಿ ಪ್ರಜ್ವಲ್ ಶಿವಾನಂದ ಕರಿಗಾರ (16) ಕೊಲೆಯಾದವ. ಈ ವಿದ್ಯಾರ್ಥಿ ನಾಪತ್ತೆಯಾದ ಕುರಿತು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಬೆಳಗಾವಿಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತನ ಧರಿಸಿದ್ದ ಶಾಲಾ ಸಮವಸ್ತ್ರದಿಂದ ಗುರುತು ಪತ್ತೆಯಾಗಿದೆ.