ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಿರುವ ಸವದತ್ತಿ ಯಲ್ಲಮ್ಮನ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ರೇಣುಕಾದೇವಿ ದೇವಸ್ಥಾನ ತೆರೆಯುವಂತೆ ಆಗ್ರಹಿಸಿ ಪ್ರಮೋದ್ ಮುತಾಲಿಕ್ ಯಲ್ಲಮ್ಮ ಗುಡ್ಡ ಚಲೋ ಕರೆ ಕೊಟ್ಟಿದ್ದರು. ಈ ಹಿನ್ನೆಲೆ ಸವದತ್ತಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಕೋವಿಡ್ ಹಿನ್ನೆಲೆ ಕಳೆದ 10 ತಿಂಗಳಿಂದ ಯಲ್ಲಮ್ಮ ದೇವಸ್ಥಾನ ಬಂದ್ ಆಗಿದೆ. ಕೊರೊನಾ ನಿಯಮಾವಳಿ ಯಾವುದೇ ಪಬ್‌ಗಿಲ್ಲ, ಕ್ಲಬ್‌ಗಿಲ್ಲ, ಬಾರ್‌ಗಿಲ್ಲ, ಮಾಲ್‌ಗಿಲ್ಲ. ರಾಜಕೀಯ ಸಭೆ ಸಮಾವೇಶಗಳಲ್ಲೂ ಈ ನಿಯಮಗಳು ಅನ್ವಯಿಸುವುದಿಲ್ಲ. ಆದರೆ ಉತ್ತರ ಕರ್ನಾಟಕದ ಪ್ರಮುಖ ಶಕ್ತಿಪೀಠ ಯಲ್ಲಮ್ಮ ಗುಡ್ಡಕ್ಕೆ ಮಾತ್ರ ಏಕೆ ಈ ನಿಯಮ?. ದೇವಿ ದರ್ಶನಕ್ಕೆ ಮಾತ್ರ ಕೊರೊನಾ ನಿಯಮಾವಳಿ ಅನ್ವಯವಾಗುತ್ತಾ ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಓದಿ:ಮೇ 24ರಿಂದ ಜೂನ್ 10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ..
ಲಕ್ಷಾಂತರ ಭಕ್ತರ ಭಾವನೆ, ಭಕ್ತಿ ಇದೆ. ಇಲ್ಲಿ ಸಾವಿರಾರು ಜನ ವ್ಯಾಪಾರಸ್ಥರಿದ್ದಾರೆ. ಭಕ್ತಿಯ ಪರೀಕ್ಷೆ ಬೇಡ, ತಾಳ್ಮೆ ಕಳೆದುಕೊಂಡರೆ ದೇವಿಯೇ ಅಧಿಕಾರಿಗಳಿಗೆ ಶಾಪ ಕೊಡ್ತಾಳೆ ಎಂದು ಗುಡುಗಿದ್ದಾರೆ.