ಬೆಳಗಾವಿ:ಶ್ರೀರಾಮನವಮಿ ಪ್ರಯುಕ್ತ ಕುಂದಾನಗರಿಯಲ್ಲಿ ಭವ್ಯ ಶೋಭಾಯಾತ್ರೆ ಜರುಗಿತು. ಈ ವೇಳೆ ಸಾಂಪ್ರದಾಯಿಕ ವಾದ್ಯತಂಡಗಳು ಗಮನ ಸೆಳೆದವು. ಬೃಹದಾಕಾರದ ಡಿಜೆ ವಾಹನದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಡಾ.ಪುನೀತ್ ರಾಜಕುಮಾರ್ ಭಾವಚಿತ್ರವನ್ನು ಕೂಡ ಡಿಸ್‌ಪ್ಲೇ ಮಾಡಲಾಯಿತು.
ಬೆಳಗಾವಿಯಲ್ಲಿ ರಾಮನವಮಿ ಶೋಭಾಯಾತ್ರೆ: ಪುನೀತ್ ಕಟೌಟ್ ಹಿಡಿದು ಅಭಿಮಾನ - ಡಿಜೆ ವಾಹನದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಡಾ.ಪುನೀತ್ ರಾಜಕುಮಾರ್ ಭಾವಚಿತ್ರ ಡಿಸ್‌ಪ್ಲೇ
ಶ್ರೀರಾಮನವಮಿ ಪ್ರಯುಕ್ತ ಬೆಳಗಾವಿಯಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.
ಡಿಜೆ ವಾಹನದ ಎಲ್‌ಇಡಿ ಸ್ಕ್ರೀನ್‌ನಲ್ಲಿ ಡಾ.ಪುನೀತ್ ರಾಜಕುಮಾರ್ ಭಾವಚಿತ್ರ ಡಿಸ್‌ಪ್ಲೇ
ಪುಟ್ಟ ಪುಟ್ಟ ಮಕ್ಕಳು ಶ್ರೀರಾಮ, ಲಕ್ಷ್ಮಣ, ಸೀತಾ ವೇಷಧಾರಿಯಾಗಿ ಭಾಗಿಯಾಗಿದ್ದು, ನೋಡುಗರ ಗಮನ ಸೆಳೆಯಿತು. ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಡಾ. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಟಿಳಕ್ ವೃತ್ತದವರೆಗೂ ಸಾಗಿತು. ಈ ವೇಳೆ ಸಾವಿರಾರು ಯುವಕರು ಕೈಯಲ್ಲಿ ಭಗವಾ ಧ್ವಜಗಳನ್ನು ಹಿಡಿದುಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ:161 ಅಡಿ ಎತ್ತರದ ಆಂಜನೇಯ ಮೂರ್ತಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ