ಕರ್ನಾಟಕ

karnataka

ETV Bharat / state

ಸರ್ಕಾರದ ಯೋಜನೆಗಳಿಂದ ವಿಶೇಷ ಚೇತನರು ವಂಚಿತ? ಒಂದು ನಿದರ್ಶನ - ಅಥಣಿ ಲೇಟೆಸ್ಟ್ ನ್ಯೂಸ್

ಅಥಣಿ ತಾಲೂಕಿನಲ್ಲಿ ವಾಸಿಸುತ್ತಿರುವ ಅಮರ್ ಭೀಮಪ್ಪ ತಳವಾರ ಎಂಬ ವಿಶೇಷಚೇತನ ವ್ಯಕ್ತಿ ಕಳೆದ ಕೆಲ ವರ್ಷಗಳಿಂದ ಸರ್ಕಾರದಿಂದ ಬರುತ್ತಿರುವ ಯೋಜನೆಗಳಿಂದ ವಂಚಿತರಾಗಿದ್ಧಾರೆ. ಇದೀಗ ಇವರು ತಮ್ಮ ಜೀವನ ಸಾಗಿಸಲು ಪರದಾಡುತ್ತಿದ್ದಾರೆ.

ವಿಶೇಷ ಚೇತನ
Special abled people

By

Published : Dec 3, 2020, 5:42 PM IST

ಅಥಣಿ:ಇಂದು ವಿಶ್ವ ವಿಶೇಷ ಚೇತನರ ದಿನಾಚರಣೆ. ವಿಶೇಷ ಚೇತನರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಆದರೆ ಬಹಳಷ್ಟು ಜನರು ಈ ಯೋಜನೆಗಳಿಂದ ವಂಚಿತರಾಗಿ ಜೀವನ ಸಾಗಿಸಲೂ ಸಂಕಷ್ಟ ಪಡುತ್ತಿದ್ದಾರೆ.

ಸರ್ಕಾರದ ಯೋಜನೆಗಳಿಂದ ವಂಚಿತನಾಗಿರುವ ವಿಶೇಷ ಚೇತನ ವ್ಯಕ್ತಿ ಭೀಮಪ್ಪ ತಳವಾರ

ಅಥಣಿ ತಾಲೂಕಿನ ಐಗಳಿ ಗ್ರಾಮದ ನಿವಾಸಿ ಅಮರ್ ಭೀಮಪ್ಪ ತಳವಾರ ಎಂಬವರು ಐದು ವರ್ಷದವರಾಗಿದ್ದಾಗ ಪೋಲಿಯೋ ಬಾಧಿಸಿದೆ. ಸರಿ ಸುಮಾರು ಮೂವತ್ತು ವರ್ಷಗಳಿಂದ ತನ್ನೆರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ಇವರು ವಿಶೇಷಚೇತರಾಗಿದ್ದಾರೆ. ಇವರ ಬಳಿ ಆಧಾರ್ ಕಾರ್ಡ್​ ಇಲ್ಲದಿರುವುದರಿಂದ ಸರ್ಕಾರ ವಿಶೇಷ ಚೇತನರಿಗೆ ನೀಡುತ್ತಿರುವ ಮಾಸಾಶನವೂ ಸಿಗುತ್ತಿಲ್ಲ.

ಸತತವಾಗಿ ಇಪ್ಪತ್ತಕ್ಕೂ ಹೆಚ್ಚು ಆಧಾರ್ ಕಾರ್ಡ್ ಮಾಡಿಸಿದರೂ ತಾಂತ್ರಿಕ ದೋಷಗಳಿಂದ ಆಧಾರ್ ಕಾರ್ಡ್ ಪಡೆಯಲು ಇವರಿಗೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ್ರೂ ಯಾರೂ ಸ್ಪಂದಿಸುತ್ತಿಲ್ಲ. ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಕೆಲವರು ಸಾವಿರಾರು ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು.

ABOUT THE AUTHOR

...view details