ಬೆಳಗಾವಿ:ಕಾರ್ಗಿಲ್ ಯುದ್ಧ, ಪುಲ್ವಾಮಾ ದಾಳಿ ಸೇರಿ ವಿವಿಧ ಯುದ್ಧಗಳು ಹಾಗೂ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಧ್ಯೇಯದೊಂದಿಗೆ ಉಮೇಶ ಜಾಧವ್ ಎಂಬುವವರು ಭಾರತ ಯಾತ್ರೆ ಕೈಗೊಂಡಿದ್ದಾರೆ. ಅವರನ್ನು ಇಂದು ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಶಂಕರಗೌಡ ಪಾಟೀಲ ಸ್ವಾಗತಿಸಿ ಗೌರವಿಸಿದ್ದಾರೆ.
ಭಾರತ ಯಾತ್ರೆ ಕೈಗೊಂಡ ದೇಶಪ್ರೇಮಿ ಉಮೇಶ್ ಜಾಧವ್ಗೆ ಬೆಳಗಾವಿಯಲ್ಲಿ ವಿಶೇಷ ಸ್ವಾಗತ - Bharat yatre
ಭಾರತ ಯಾತ್ರೆ ಕೈಗೊಂಡಿರುವ ದೇಶ ಪ್ರೇಮಿ ಉಮೇಶ್ ಜಾಧವ್ ಇಂದು ಬೆಳಗಾವಿಗೆ ಆಗಮಿಸಿದ್ದು, ಅವರನ್ನು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಶಂಕರಗೌಡ ಪಾಟೀಲ ಸ್ವಾಗತಿಸಿ ಗೌರವಿಸಿದ್ದಾರೆ.
ನಗರದ ಸರ್ದಾರ್ ಮೈದಾನದಲ್ಲಿರುವ ತಮ್ಮ ಕಚೇರಿಗೆ ಜಾಧವ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡು ಸತ್ಕರಿಸಿದರು. ಈವರೆಗೆ ದೇಶದ ಮೇಲೆ ನಡೆದ ಭಯೋತ್ಪಾದಕ ದಾಳಿಗಳು ಹಾಗೂ ಯುದ್ಧಗಳಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥವಾಗಿ ದೇಶದ ಉದ್ದಗಲಕ್ಕೂ ಹುತಾತ್ಮ ಯೋಧರ ಸಮಾಧಿಗಳಿಂದ ಸಂಗ್ರಹ ಮಾಡುತ್ತಿರುವ ಪವಿತ್ರ ಮಣ್ಣನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಾಣವಾಗಲಿರುವ ಸೇನಾ ಸ್ಮಾರಕದಲ್ಲಿ ಭಾರತದ ಭೂಪಟ ನಿರ್ಮಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಉಮೇಶ ಜಾಧವ್ ತಿಳಿಸಿದರು.
ಈ ವೇಳೆ ನೆರೆದಿದ್ದ ಕುಂದಾ ನಗರಿ ಜನತೆ ಜಾಧವ್ ಅವರ ದೇಶಪ್ರೇಮಕ್ಕೆ ಕೋಟಿ ನಮನ ಸಲ್ಲಿಸಿದರು. ಯಾತ್ರೆ ದೇಶದ ಉದ್ದಗಲಕ್ಕೂ ನಿರ್ವಿಘ್ನವಾಗಿ ಸಾಗಲೆಂದು ಶುಭ ಹಾರೈಸಿ ಬೀಳ್ಕೊಟ್ಟರು.