ಅಥಣಿ:ಉತ್ತರ ಕರ್ನಾಟಕ ಭಾಗದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿನ ದೀಪಗಳ ಹಬ್ಬದಲ್ಲಿ ಮಹಾಭಾರತದ ಪಾಂಡವರಿಗೆ ವಿಶೇಷ ಸ್ಥಾನಮಾನ ನೀಡಿ ಪೂಜಿಸಲಾಗುತ್ತದೆ.
ಪಾಂಡವರಿಗೆ ಇಂದು ವಿಶೇಷ ವಿದಾಯ... ಉ.ಕದಲ್ಲಿ ಹೀಗೊಂದು ಆಚರಣೆ
ದೀಪಾವಳಿ ಹಬ್ಬವನ್ನ ಉ.ಕದಲ್ಲಿ ವಿಶೇಷವಾಗಿ ಆಚರಿಸಲಾಗಿದ್ದು, ದೀಪಗಳ ಹಬ್ಬದಂದು ಪಾಂಡವರಿಗೂ ಇಲ್ಲಿಯ ಜನ ವಿಶೇಷ ಪೂಜೆ ಸಲ್ಲಿಸುತ್ತಾರೆ.
ದಸರಾ ದಿನದಂದು ಪಾಂಡವರು ವನವಾಸಕ್ಕೆ ಹೊರಟ ದಿನ. ಹಾಗಾಗಿ ದೀಪಾವಳಿ ಹಬ್ಬದಂದು ಪಾಂಡವರು ಇರದ ಹಿನ್ನೆಲೆಯಲ್ಲಿ ಕುಂತಿದೇವಿ, ಗೋ ಸಗಣಿಯಲ್ಲಿ ಪಾಂಡವರ ರೂಪವನ್ನು ತಯಾರಿಸಿ ಅವುಗಳಿಗೆ ಆರತಿ ಮಾಡಿದರೆಂಬುದು ನಂಬಿಕೆ. ಅಂತೆಯೇ ಉತ್ತರ ಕರ್ನಾಟಕದ ಭಾಗದಲ್ಲಿ ಹಾಗೂ ಮಹಾರಾಷ್ಟ್ರದ ಕೆಲವೆಡೆ ಸಗಣಿ ರೂಪದಲ್ಲಿ ಪಾಂಡವರನ್ನ ರೂಪಿಸಿ ಪೂಜಿಸುತ್ತಾ ಬರಲಾಗುತ್ತಿದೆ.
ಮಹಿಳೆಯರು ದೇಸಿ ಸಗಣಿಯಲ್ಲಿ ಪಾಂಡವರನ್ನು ತಯಾರಿಸಿ, ಅವುಗಳನ್ನು ಹೊನ್ನೆ ಹೂಗಳಿಂದ ಸಿಂಗರಿಸಿ ಮೂರು ದಿನ ಪೂಜಿಸುತ್ತಾರೆ. ಪೂಜೆ ಸಲ್ಲಿಸಿದ ಬಳಿಕ ಮನೆಯ ಮಾಳಿಗೆಯ ಮೇಲೆ ಇಟ್ಟು ಪಾಂಡವರಿಗೆ ವಿದಾಯ ಸಲ್ಲಿಸುತ್ತಾರೆ.