ಕರ್ನಾಟಕ

karnataka

ETV Bharat / state

ಸದನಕ್ಕೆ ತಡವಾಗಿ ಬಂದ ಯುವ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ಯು.ಟಿ. ಖಾದರ್ - U T Khadar class to Young MLAs

U T Khadar class to Young MLAs: ಜೆಡಿಎಸ್​ ಶಾಸಕ ಶರಣಗೌಡ ಕಂದಕೂರ್​, ಬಿಜೆಪಿ ಸದಸ್ಯ ಶರಣು ಸಲಗಾರ್​ ಹಾಗೂ ಕಾಂಗ್ರೆಸ್​ ಸದಸ್ಯ ಬಸವರಾಜು ಶಿವಗಂಗಾ ಸದನಕ್ಕೆ ತಡವಾಗಿ ಆಗಮಿಸಿದ್ದು, ಅವರನ್ನು ಯು ಟಿ ಖಾದರ್​ ಪ್ರಶ್ನಿಸಿದ್ದಾರೆ.

U T Khadar class to Young MLAs
ಸದನಕ್ಕೆ ತಡವಾಗಿ ಬಂದ ಯುವ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ಯು.ಟಿ. ಖಾದರ್

By ETV Bharat Karnataka Team

Published : Dec 13, 2023, 3:28 PM IST

Updated : Dec 13, 2023, 4:06 PM IST

ಸದನಕ್ಕೆ ತಡವಾಗಿ ಬಂದ ಯುವ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಸ್ಪೀಕರ್ ಯು.ಟಿ. ಖಾದರ್

ಬೆಂಗಳೂರು/ ಬೆಳಗಾವಿ: ಹಿರಿಯ ಸದಸ್ಯರು ಹಾಗೂ ಸಚಿವರು ಸದನಕ್ಕೆ ಸರಿಯಾದ ಸಮಯಕ್ಕೆ ಬಂದಿದ್ದಾರೆ. ಸರಿಯಾದ ಸಮಯಕ್ಕೆ ಸದನಕ್ಕೆ ಬರಲು ನಿಮಗೆ ಏನಾದರೂ ಅಡ್ಡಿಯಾಗಿದೆಯೇ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಯುವ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ಯುವ ಶಾಸಕರಾದ ಜೆಡಿಎಸ್‌ನ ಶರಣಗೌಡ ಕಂದಕೂರ್, ಬಿಜೆಪಿ ಸದಸ್ಯ ಶರಣು ಸಲಗಾರ್ ಹಾಗೂ ಕಾಂಗ್ರೆಸ್‌ ಸದಸ್ಯ ಬಸವರಾಜು ಶಿವಗಂಗಾ ಅವರು ಪ್ರಶ್ನೋತ್ತರ ವೇಳೆ ಸದನಕ್ಕೆ ತಡವಾಗಿ ಬಂದಿದ್ದನ್ನು ಗಮನಿಸಿದ ಸ್ಪೀಕರ್, ಇನ್ನು ಮುಂದೆ ಸರಿಯಾದ ಸಮಯಕ್ಕೆ ಸದನಕ್ಕೆ ಬರುವಂತೆ ಶಾಸಕರಿಗೆ ತಾಕೀತು ಮಾಡಿದರು.

ಸದನದಲ್ಲಿ ತಮ್ಮ ಪ್ರಶ್ನೆಗೆ ಉತ್ತರ ಪಡೆಯಲು ಶರಣಗೌಡ ಕಂದಕೂರ್‌ ಮುಂದಾದಾಗ ಸ್ಪೀಕರ್ ಯು.ಟಿ ಖಾದರ್, "ಸದನಕ್ಕೆ‌ ತಡವಾಗಿ ಏಕೆ ಬಂದಿದ್ದು?" ಎಂದು ಪ್ರಶ್ನೆ ಮಾಡಿದರು. ಆ ವೇಳೆ 'ಸಾರಿ ಸರ್' ಎಂದು ಶಾಸಕ ಶರಣಗೌಡ ಕಂದಕೂರ್ ಹೇಳಿದಾಗ, 'ಸಾರಿ ಕೇಳಲಿಲ್ಲ, ಕಾರಣ ಏನು ಎಂದು ಕೇಳಿದ್ದು' ಎಂದರು. ಕೆಜೆ ಜಾರ್ಜ್, ಎಚ್‌.ಕೆ ಪಾಟೀಲ್ ಅಂತ ಹಿರಿಯ ಸಚಿವರು, ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಆರ್ ಅಶೋಕ್ ಅವರಂತಹ ಹಿರಿಯರು ಸಮಯಕ್ಕೆ ಸರಿಯಾಗಿ ಬಂದಿದ್ದಾರೆ. ನೀವು ಏಕೆ ಬಂದಿಲ್ಲ?" ಎಂದು ಪ್ರಶ್ನಿಸಿದರು.

ಆಗ 'ಸರ್, ಸಚಿವರು ಸಭೆ ಕರೆದಿದ್ದರು. ಅದಕ್ಕೆ ನಾನು ಅಲ್ಲಿ ಹೋಗಿ ಕುಳಿತಿದ್ದೆ. ಸಭೆ ಮುಂದೂಡಲಾಗಿರುವ ಬಗ್ಗೆ ನಮಗೆ ಮಾಹಿತಿಯೇ ಕೊಟ್ಟಿಲ್ಲ. ಅದಕ್ಕೆ ನಾವು ಅಲ್ಲಿ ಹೋಗಿ‌ ಕುಳಿತಿದ್ದೆವು' ಎಂದು ಶರಣಗೌಡ ಕಂದಕೂರ್ ಸಮರ್ಥನೆ ನೀಡಿದರು. ಆಗ ಸ್ಪೀಕರ್ ಅವರು, 'ಹಿರಿಯರು ಸದನಕ್ಕೆ 9 ಗಂಟೆಗೆ ಬಂದು ಮಾದರಿ ಆಗಿದ್ದಾರೆ. ಆದ್ದರಿಂದ ಮುಂದೆ ಬೇಗ ಬನ್ನಿ' ಎಂದು ಸೂಚಿಸಿದರು.

ಅದೇ ರೀತಿ ಬಿಜೆಪಿ ಸದಸ್ಯ ಶರಣು ಸಲಗಾರ್ ಅವರೂ ತಡವಾಗಿ ಸದನಕ್ಕೆ ಬಂದಿದ್ದಕ್ಕೆ ಸ್ಪೀಕರ್ ಪ್ರಶ್ನೆ ಮಾಡಿದರು. 'ರೂಂನಿಂದ ಬರಲು ಕಾರ್ ವ್ಯವಸ್ಥೆ ಇರಲಿಲ್ಲ. ಹಾಗಾಗಿ ತಡವಾಯಿತು' ಎಂದು‌ ಶರಣು ಸಲಗಾರ್ ಉತ್ತರಿಸಿದರು.

ಇನ್ನು ಬಸವರಾಜು ಶಿವಗಂಗಾ ಅವರು ತಡವಾಗಿ ಬಂದಿದ್ದರು. 'ಏಕೆ ಲೇಟ್ ಬಂದ್ರಿ? ' ಎಂದು ಸ್ಪೀಕರ್ ಖಾದರ್ ಪ್ರಶ್ನಿಸಿದಾಗ, 'ಬಿಳಿ ಶರ್ಟ್ ಹಾಕಿಕೊಂಡು‌ ಬಂದಿದ್ದೆ, ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ನಡೆಗೆ ಪ್ರತಿಭಟನಾತ್ಮಕವಾಗಿ ಕಪ್ಪು ಬಟ್ಟೆ ಧರಿಸಿ ಬಂದಿದ್ದೇನೆ. ಅದಕ್ಕೆ ತಡವಾಯಿತು' ಎಂದು ಹೇಳಿದರು. ಕಪ್ಪು ಶರ್ಟ್ ಧರಿಸಿ ಸದನಕ್ಕೆ ಬರಲು ಅವಕಾಶ ಇಲ್ಲ. ಏನೇ ಬೇಸರ ಇದ್ದರೂ, ಬೆಳಗ್ಗೆ ಬೇಗ ಎದ್ದು ಸರಿಯಾದ ಸಮಯಕ್ಕೆ ಸದನಕ್ಕೆ ಬನ್ನಿ ಎಂದು ಅವರಿಗೂ ಸ್ಪೀಕರ್ ಸೂಚಿಸಿದರು.

ಇದನ್ನೂ ಓದಿ:ಸದನದೊಳಗೆ ಬಿಟ್ಟು, ಹೊರಗೆ ಮಾತನಾಡಿದರೆ ಯಾರ್ರೀ ಕೇಳ್ತಾರೆ: ಡಿಸಿಎಂ ಡಿ ಕೆ ಶಿವಕುಮಾರ್

Last Updated : Dec 13, 2023, 4:06 PM IST

ABOUT THE AUTHOR

...view details