ಕರ್ನಾಟಕ

karnataka

By

Published : Apr 27, 2020, 5:54 PM IST

ETV Bharat / state

ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ನಡೆಸಿದ ಯೋಧ ಅರೆಸ್ಟ್; ಎಸ್​ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಿಷ್ಟು!

ಮಾಸ್ಕ್ ಧರಿಸದ ಕಾರಣ ಮತ್ತು ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಕ್ಕೆ CRPF ಯೋಧನನ್ನು ಬಂಧಿಸಲಾಗಿದ್ದು ಈ ಬಗ್ಗೆ ಎಸ್​ಪಿ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯೆ ನೀಡಿದ್ದಾರೆ.

SP Lakshman Nimbargi reaction about warrior arrest
ಸಾಂದರ್ಭಿಕ ಚಿತ್ರ

ಬೆಳಗಾವಿ: ಕರ್ತವ್ಯನಿರತ ಪೇದೆಯ ಮೇಲೆ ಹಲ್ಲೆ ಮಾಡಿದ ಆರೋಪದಡಿ ಸಿಆರ್​​ಪಿಎಫ್ ಯೋಧನನ್ನು ಬೆಳಗಾವಿ ಜಿಲ್ಲೆಯ ಸದಲಗಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಸಿಆರ್​ಪಿಎಫ್ ಯೋಧನಿಂದ ಹಲ್ಲೆ ಆರೋಪ- ವಿಡಿಯೋ

ಈ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಎಸ್​ಪಿ ಲಕ್ಷ್ಮಣ್ ನಿಂಬರಗಿ, ಏ. 23ರಂದು ಇಬ್ಬರು ಪೇದೆಗಳು ಯಕ್ಸಂಬಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸಿಆರ್​​ಪಿಎಫ್ ಯೋಧ ತನ್ನ ಐದಾರು ಸ್ನೇಹಿತರ ಜತೆ ನಿಂತಿದ್ದ. ಪೊಲೀಸರನ್ನು ಕಂಡ ತಕ್ಷಣ ಸ್ನೇಹಿತರು ಓಡಿ ಹೋದರೂ ಯೋಧ ಮಾತ್ರ ಅಲ್ಲೇ ಇದ್ದರು. ಈ ವೇಳೆ ಮಾಸ್ಕ್ ಏಕೆ ಧರಿಸಿಲ್ಲ ಎಂದು ಯೋಧನನ್ನು ಪ್ರಶ್ನಿಸಿದಾಗ ಆತ ಪೊಲೀಸರ ಜತೆಗೆ ವಾಗ್ವಾದ ಮಾಡಿದ್ದಾನೆ.

ಕರ್ತವ್ಯನಿರತ ಪೇದೆಯ ಮೇಲೆ ಹಲ್ಲೆ

ಸಾಲದೆಂಬಂತೆ ಕಾಲರ್ ಹಿಡಿದು ಪೇದೆಯ ಹೊಟ್ಟೆಗೆ ಒದ್ದಿದ್ದಾನೆ. ಆಗ ಕರ್ತವ್ಯದಲ್ಲಿದ್ದ ಮತ್ತೋರ್ವ ಪೇದೆ ಲಾಠಿ ಬೀಸಿ ಯೋಧನನ್ನು ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ದಿನವೇ ಯೋಧನನ್ನು ಸದಲಗಾ ಠಾಣೆಗೆ ಕರೆದೊಯ್ಯಲಾಗಿತ್ತು.

ಎಸ್​ಪಿ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿ

ಅವತ್ತೇ ಸಿಆರ್‌ಪಿಎಫ್ ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಬಂಧಿಸಿದ ದಿನವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆದರೆ, ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅರ್ಧ ವಿಡಿಯೋ ಮಾತ್ರ ಹರಿದಾಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ ಎಸ್​ಪಿ ಲಕ್ಷಣ ನಿಂಬರಗಿ, ಘಟನೆಯ ಸಂಪೂರ್ಣ ವಿಡಿಯೋ, ಪೊಲೀಸನ ಹೊಟ್ಟೆಗೆ ಒದ್ದಿದ ಗುರುತು ಇರುವ ಫೋಟೋ ಮಾಧ್ಯಮಗಳಿಗೆ ನೀಡಿದ್ದಾರೆ.

ABOUT THE AUTHOR

...view details