ಕರ್ನಾಟಕ

karnataka

ETV Bharat / state

ಹೆತ್ತವ್ವನನ್ನು ನಡುರಸ್ತೆಯಲ್ಲೇ ಬಿಟ್ಟೋಗುತ್ತಿದ್ದ ಮಗ: ಕಾನೂನು ವಿದ್ಯಾರ್ಥಿಗೆ ಪೊಲೀಸರಿಂದ ಪಾಠ - ಮಾನಸಿಕ ಅಸ್ವಸ್ಥ ತಾಯಿಯನ್ನು ಬಿಟ್ಟು ಹೋದ ಮಗ

ಮಾನಸಿಕ ಕಾಯಿಲೆಗೆ ತುತ್ತಾಗಿದ್ದ ಹೆತ್ತ ತಾಯಿಯನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಯ ಮುಂದೆ ಬಿಟ್ಟು ಹೋಗಲು ಯತ್ನಿಸಿದ ಯುವಕನನ್ನು ಹಿಡಿದು ಸ್ಥಳೀಯರು ಮತ್ತು ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿರುವ ಪೊಲೀಸರು ಮತ್ತೊಮ್ಮೆ ಇಂತಹ ತಪ್ಪು ಮಾಡದಂತೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

son-tried-to-leave-his-mother-in-the-middle-road-at-athani
ನಡುರಸ್ತೆ ಬಿಟ್ಟು ಹೋಗುತ್ತಿದ್ದ ಮಗ

By

Published : Aug 5, 2021, 7:24 PM IST

Updated : Aug 5, 2021, 8:44 PM IST

ಅಥಣಿ(ಬೆಳಗಾವಿ): ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದ ಮಗನನ್ನು ಹಿಡಿದು ಪೊಲೀಸರು ಮತ್ತು ಸಾರ್ವಜನಿಕರು ಬುದ್ಧಿವಾದ ಹೇಳಿದ ಘಟನೆ ನಗರದಲ್ಲಿ ನಡೆದಿದೆ.

ಸ್ಥಳಿಯ ನಿವಾಸಿ ಶ್ರೀಧರ್ ಆರ್. ಸೋಳಸಿ ಎಂಬಾತ ಹೆತ್ತ ತಾಯಿಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗುತ್ತಿದ್ದ. ಇದನ್ನ ಗಮನಿಸಿದ ಸಾರ್ವಜನಿಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ನಗರ ಪೊಲೀಸರು ಹಾಗೂ ಜನರು ಬುದ್ಧಿವಾದ ಹೇಳಿ ಕಳಿಸಿದ್ದಾರೆ.

ಹಡೆದವ್ವನನ್ನು ನಡುರಸ್ತೆ ಬಿಟ್ಟು ಹೋಗುತ್ತಿದ್ದ ಮಗ

ಘಟನೆ ವಿವರ: ಮಹಿಳೆಯ ಮಗ ಶ್ರೀಧರ ಮಹಾರಾಷ್ಟ್ರದ ಪುಣೆಯಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ತಾಯಿ-ಮಗ ಪುಣೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಅಥಣಿಗೆ ಬಂದಿದ್ದರು.

ಶ್ರೀಧರನು ತಾಯಿಗೆ ಮಾನಸಿಕವಾಗಿ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಅಥಣಿ ಸಾರ್ವಜನಿಕ ಆಸ್ಪತ್ರೆ ಮುಂದೆ ಬಿಟ್ಟು ಹೋಗಲು ಪ್ರಯತ್ನಿಸಿದ್ದಾನೆ ಎನ್ನಲಾಗ್ತಿದೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ತಲೆಹಾಕಿ ಶ್ರೀಧರ ಕಡೆಯಿಂದ ತಪ್ಪೊಪ್ಪಿಗೆ ಮುಚ್ಚಳವನ್ನು ಬರೆಸಿಕೊಂಡು, ಮುಂದೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿ ತಾಯಿಯೊಂದಿಗೆ ಮಗನನ್ನು ಕಳುಹಿಸಿಕೊಟ್ಟಿದ್ದಾರೆ.

Last Updated : Aug 5, 2021, 8:44 PM IST

ABOUT THE AUTHOR

...view details