ಚಿಕ್ಕೋಡಿ: ಕೆಎಸ್ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದು, ಬಸ್ ಮುಂಭಾಗದ ಗಾಜು ಜಖಂಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಸಾರಿಗೆ ನೌಕರರ ಮುಷ್ಕರ 7ನೇ ದಿನವೂ ಮುಂದುವರೆದಿದ್ದು, ಮುಷ್ಕರದ ನಡುವೆ ಕೆಲವು ಬಸ್ಗಳು ಸಂಚಾರ ನಡೆಸಿದ್ದವು. ಚಿಕ್ಕೋಡಿ - ಹುಕ್ಕೇರಿ ಪಟ್ಟಣಗಳಿಗೆ ಸಂಚಾರ ನಡೆಸುತ್ತಿದ್ದ ಬಸ್ ಮೇಲೆ ಕಲ್ಲು ತೂರಿದ್ದಾರೆ. ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದ ಬಳಿ ಬೈಕ್ ನಲ್ಲಿ ಬಂದು ಬಸ್‌ಗೆ ಕಲ್ಲು ತೂರಿ ಪರಾರಿಯಾಗಿದ್ದಾರೆ.